

ಸಿಂಗಪುರ: ರೆಡ್ ಬುಲ್ ನ ಡೇನಿಯಲ್ ರಿಕಾರ್ಡೋ ಅವರಿಂದ ತೀವ್ರ ಪೈಪೋಟಿ ಎದುರಿಸಿದರೂ ತಮ್ಮ ಮುನ್ನಡೆಯನ್ನು ಅಂತಿಮ ಹಂತದವರೆಗೂ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಫೆರಾರಿ ತಂಡದ ಫಾರ್ಮುಲಾ ಒನ್ ಚಾಲಕ ಸೆಬಾಸ್ಟಿಯನ್ ವೆಟಲ್ ಸಿಂಗಪುರ ಗ್ರ್ಯಾನ್ ಪ್ರೀ ರೇಸ್ ನಲ್ಲಿ ಚಾಂಪಿಯನ್ ಆದರು.
ಭಾನುವಾರ ನಡೆದ ಪ್ರಮುಖ ರೇಸ್ ನಲ್ಲಿ ಸೆಬಾಸ್ಟಿಯನ್ ವೆಟಲ್ 61 ಲ್ಯಾಪ್ ಗಳನ್ನು 2:01:22.118 ಸೆ.ಗಳಲ್ಲಿ ಪೂರೈಸಿ ಅಗ್ರಸ್ಥಾನ ಪಡೆದು 25 ಅಂಕ ಸಂಪಾದಿಸಿದರು. ರೆಡ್‍ಬುಲ್ ಚಾಲಕ ಡೇನಿಯಲ್ ರೆಕಾರ್ಡೋ 2ನೇ ಸ್ಥಾನ ಪಡೆದರು. ಫೆರಾರಿಯ ಮತ್ತೊಬ್ಬ ಚಾಲಕ ಕಿಮಿ ರಾಯ್ಕೋನನ್ನ 3 ನೇ ಸ್ಥಾನ ಪಡೆದು ಪೋಡಿಯಂ ಮೇಲೆ ನಿಂತರು. ಇದು ವೆಟಲ್ ಗೆ 4ನೇ ಸಿಂಗಪುರ ಪ್ರಶಸ್ತಿ ಹಾಗೂ ವೃತ್ತಿಜೀವನದ 41ನೇ ಎಫ್ 1 ಗೆಲುವು. ಪ್ರಸಕ್ತ ಸಾಲಿನ ಚಾಂಪಿಯನ್‍ಶಿಪ್ ರೇಸ್‍ನಲ್ಲಿ ಮುಂದಿರುವ ಮರ್ಸಿಡೆಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ರೇಸ್ ನಲ್ಲಿ ಮುಂದಿರುವ ಮರ್ಸಿಡೆಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ರೇಸ್ ನ ಅರ್ಧದಲ್ಲೇ ಹೊರ ನಡೆದು ನಿರಾಸೆ ಅನುಭವಿಸಿದರು.
ಐದನೇ ಕ್ರಮಾಂಕದಿಂದ ರೇಸ್ ಆರಂಭಿಸಿದ ಹ್ಯಾಮಿಲ್ಟನ್, ತಾಂತ್ರಿಕ ದೋಷ ದಿಂದಾಗಿ ನಿವೃತ್ತಿಯಾಗ ಬೇಕಾಯಿತು ಇನ್ನು ಹ್ಯಾಮಿಲ್ಟನ್ ಜತೆಗೆ ರೇಸ್‍ನಲ್ಲಿರುವ ಸಹ ಚಾಲಕ ನಿಕೊ ರಾಸ್ ಬರ್ಗ್ 6ನೇ ಕ್ರಮಾಂಕದಲ್ಲಿ ರೇಸ್ ಆರಂಭಿಸಿದರೂ ಉತ್ತಮ ಪ್ರದರ್ಶನ ನೀಡಿ 4ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. ಆ ಮೂಲಕ ಹ್ಯಾಮಿಲ್ಟನ್ ಜತೆಗೆ ಚಾಂಪಿಯನ್‍ಶಿಪ್‍ಗಾಗಿನ ಅಂತರವನ್ನು 41 ಪಾಯಿಂಟ್ಸ್ ಗೆ ಇಳಿಸಿಕೊಂಡರು.