ಧೋನಿ, ಕೊಹ್ಲಿ ಪ್ರೇರಕ ಶಕ್ತಿ

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸವಾಲಿನಿಂದ ಕೂಡಿದ್ದರೂ, ಹೋರಾಟದ ಪ್ರೇರಕ ಶಕ್ತಿಗಳೆನಿಸಿರುವ ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ...
ಅಮಿತ್ ಮಿಶ್ರಾ
ಅಮಿತ್ ಮಿಶ್ರಾ
Updated on: 
ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸವಾಲಿನಿಂದ ಕೂಡಿದ್ದರೂ, ಹೋರಾಟದ ಪ್ರೇರಕ ಶಕ್ತಿಗಳೆನಿಸಿರುವ ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ದಿಟ್ಟ ಪೈಪೋಟಿ ನೀಡಲಿದೆ ಎಂದು ಭಾರತ ಕ್ರಿಕೆಟ್ ತಂಡದ ಲೆಗ್‍ಸ್ಪಿನ್ನರ್ ಅಮಿತ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
ಅಕ್ಟೋಬರ್ 2ರಿಂದ ಶುರುವಾಗಲಿರುವ ಪ್ರತಿಷ್ಠಿತ ಗಾಂಧಿ-ಮಂಡೇಲಾ ಸರಣಿಗಾಗಿ ಉದ್ಯಾನನಗರಿಯಲ್ಲಿ ನಡೆಯುತ್ತಿರುವ ಏಳು ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮುಂಬರುವ ಸರಣಿಯ ಕುರಿತು ಮಾತನಾಡಿದರು. 'ಭಾರತ ಮತ್ತು ದ.ಆಫ್ರಿಕಾ ನಡುವಣದ ಈ ಸರಣಿ ಸವಾಲಿನಿಂದ ಕೂಡಿರುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದಾಗ್ಯೂ ನಾವು ಕೂಡ ಅತ್ಯುತ್ತಮ ಏಕದಿನ ತಂಡವಾಗಿ ಗುರುತಿಸಿಕೊಂಡಿದ್ದೇವೆ. 
ಇತ್ತೀಚಿನ ಕೆಲ ಸರಣಿಗಳಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡುವುದರೊಂದಿಗೆ ತನ್ನ ಸಾಮಥ್ರ್ಯವೇನೆಂದು ತೋರಿದೆ. ದ.ಆಫ್ರಿಕಾ ವಿರುದ್ಧದ ಪಂದ್ಯಗಳಲ್ಲಿ ಆಟದ ಸ್ಥಿತಿಗತಿಗಿಂತ ಉತ್ತಮ ಪ್ರದರ್ಶನ ನೀಡುವುದರತ್ತ ಮಾತ್ರ ಗಮನವಹಿಸಲಾಗಿದೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇನ್ನು ನಾಯಕ ಧೋನಿ ಹಾಗೂ ವಿರಾಟ್ ಕೊಹ್ಲಿಯಂಥ ಆಟಗಾರರಿಂದ ತಂಡದ ಹೋರಾಟದ ಶಕ್ತಿ ಹೆಚ್ಚಿದೆ. ಪ್ರತಿಯೊಬ್ಬ ಆಟಗಾರನಿಗೂ ಸಕಲ ಪ್ರೋತ್ಸಾಹ ನೀಡುತ್ತಿರುವ ಧೋನಿ ಮತ್ತು ಕೊಹ್ಲಿ ಆಟಗಾರರಲ್ಲಿನ ಆತ್ಮಸ್ಥೈರ್ಯವನ್ನೂ ಹೆಚ್ಚಿಸಿದ್ದಾರೆ ಎಂದು ಮಿಶ್ರಾ ನುಡಿದರು. 
ಅಂತಿಮ ಇಲೆವೆನ್‍ನಲ್ಲಿ ತನಗೆ ಸ್ಥಾನ ಸಿಗುತ್ತದೋ ಇಲ್ಲವೋ ಎಂಬುದರ ಬಗ್ಗೆ ಚಿಂತಿಸದೆ ಬೌಲಿಂಗ್ ಹಾಗೂ ಬ್ಯಾಟಿಂಗ್‍ನಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುವುದಾಗಿಯೂ ಅಮಿತ್ ಮಿಶ್ರಾ ಇದೇ ವೇಳೆ ತಿಳಿಸಿದರು. 'ನನ್ನ ಮಟ್ಟಿಗಂತೂ ವೃತ್ತಿಪರ ಆಟಗಾರ ಈ ಬಗ್ಗೆ ಹೆಚ್ಚು ಗಮನ ಹರಿಸಕೂಡದು. ತಂಡದಲ್ಲಿ ಸ್ಥಾನ ಸಿಗುತ್ತದೋ ಬಿಡುತ್ತದೋ ಬೇರೆ ಮಾತು. ಆಟಗಾರ ಮಾತ್ರ ಪ್ರದ ರ್ಶನಕ್ಕಷ್ಟೇ ಆದ್ಯತೆ ನೀಡಬೇಕು. ಕಳೆದ 4 ವರ್ಷಗ ಳಿಂದ ಮಾಡುತ್ತಿರುವುದೂ ಇದನ್ನೇ. ಇತ್ತೀಚಿನ ಶ್ರೀಲಂಕಾ ಪ್ರವಾಸದಲ್ಲಿ ಅದರ ಛಾಯೆಯನ್ನು ಕಾಣಬಹುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com