ಹೊಸ ದಾಖಲೆ ಬರೆದ 105ರ ಅಜ್ಜ!

ಈ ಹಿರಿಯಜ್ಜನ ವಯಸ್ಸಾದರೂ ಎಷ್ಟು ಗೊತ್ತಾ.. ಬರೋಬ್ಬರಿ 105! ಇದಕ್ಕಿಂತಲೂ ಗಮ್ಮತ್ತಿನ ವಿಷಯವೆಂದರೆ ಇವರು ಮಾಡಿರುವ ಸಾಧನೆ.
ಗೆದ್ದ ಸಂಭ್ರಮದಲ್ಲಿ ಹಿಡೆಕಿಚಿ ಮಿಯಾಝಾಕಿ
ಗೆದ್ದ ಸಂಭ್ರಮದಲ್ಲಿ ಹಿಡೆಕಿಚಿ ಮಿಯಾಝಾಕಿ
Updated on: 

ಕ್ಯೊಟೊ: ಈ ಹಿರಿಯಜ್ಜನ ವಯಸ್ಸಾದರೂ ಎಷ್ಟು ಗೊತ್ತಾ.. ಬರೋಬ್ಬರಿ 105! ಇದಕ್ಕಿಂತಲೂ ಗಮ್ಮತ್ತಿನ ವಿಷಯವೆಂದರೆ ಇವರು ಮಾಡಿರುವ ಸಾಧನೆ.

ಜಪಾನ್‍ನ ಕ್ಯೊಟೊ ನಗರದಲ್ಲಿ ಏರ್ಪಡಿಸಲಾಗಿದ್ದ ಹಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹಿಡೆಕಿಚಿ ಮಿಯಾಝಾಕಿ ಎಂಬ ಶತಾಯುಷಿ ಅಜ್ಜ 100 ಮೀ. ಓಟವನ್ನು 42.22 ಸೆಕೆಂಡ್‍ಗಳಲ್ಲಿ ಕ್ರಮಿಸಿ, ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಅಲ್ಲದೆ, `ಗೋಲ್ಡನ್ ಬೋಲ್ಟ್' ಎಂಬ ಬಿರುದನ್ನೂ ಪಡೆದಿದ್ದಾರೆ. ಇವರ ಈ ಸಾಧನೆ ಇದೀಗ ಗಿನ್ನಿಸ್ ದಾಖಲೆಯ ಪುಸ್ತಕವನ್ನೂ ಪ್ರವೇಶಿಸಿದ್ದು, ಇಡೀ ವೈದ್ಯಕೀಯ ಲೋಕವನ್ನೇ  ಬೆಚ್ಚಿಬೀಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com