ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ‘ಸ್ವಚ್ಛ ಭಾರತ ಅಭಿಯಾನ’ದ ಕುರಿತು ಈಗಾಗಲೇ ಎಲ್ಲೇಡೆ ಪ್ರಚಾರ ಮಾಡಲಾಗುತ್ತಿದೆ. ಈ ಸ್ವಚ್ಛ ಭಾರತ ಗೀತೆಯ ಸಾಹಿತ್ಯವನ್ನು ಪರ್ಸೂನ್ ಜೋಷಿ ರಚಿಸಿದ್ದು, ಶಂಕರ್-ಎಸಾನ್-ಲಾಯ್ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಂಕರ್ ಮಹದೇವನ್ ಮತ್ತು ಸಂಗಡಿಗರು ಹಾಡಿರುವ ಈ ಹಾಡಿನ ನಡುವೆ ಬರುವು ಕೆಲವು ಸ್ಫೂರ್ತಿದಾಯಕ ವಾಕ್ಯಗಳಿದ್ದು, ಅದಕ್ಕೆ ಸಚಿನ್ ಧ್ವನಿ ನೀಡಲಿದ್ದಾರೆ.