ಹೈದರಾಬಾದ್: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತ್ತ ನೈಟ್ ರೈಡರ್ಸ್ ಮಣಿಸಿದೆ.
ಹೈದರಾಬಾದ್ ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತ್ತು. 143 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಕೋಲ್ಕತ್ತ ನೈಟ್ ರೈಡರ್ಸ್ 18.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಜಯದ ನಗೆ ಬೀರಿತು.
ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅಜೇಯ 90 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣಕರ್ತರಾದರು. ಇನ್ನು ಕೋಲ್ಕತ್ತಾ ಪರ ರಾಬಿನ್ ಉತ್ತಪ್ಪ 38 ರಸೂಲ್ 2 ರನ್ ಗಳಿಸಿ ಔಟಾದರೆ, ಮನಿಷ್ ಪಾಂಡೆ ಅಜೇಯ 11 ರನ್ ಗಳಿಸಿದ್ದಾರೆ.
ಹೈದರಾಬಾದ್ ಪರ ಮುಸ್ತಫಿಜೂರ್ ರಹಮಾನ್ ಹಾಗೂ ಆಶೀಶ್ ರೆಡ್ಡಿ ತಲಾ 1 ವಿಕೆಟ್ ಪಡೆದಿದ್ದಾರೆ.
ಹೈದರಾಬಾದ್ ಪರ ಡೇವಿಡ್ ವಾರ್ನರ್ 13, ಶಿಖರ್ ಧವನ್ 6, ಹೆನ್ರಿಕ್ಸ್ 6, ಮೊರ್ಗನ್ 51, ಹೂಡ 6, ಓಜಾ 37, ಆಶೀಶ್ ರೆಡ್ಡಿ 13, ಶರ್ಮಾ ಅಜೇಯ 2 ಹಾಗೂ ಭುವನೇಶ್ವರ್ ಕುಮಾರ್ 0 ರನ್ ಗಳಿಸಿದ್ದಾರೆ.
ಕೋಲ್ಕತ್ತಾ ಪರ ಉಮೇಶ್ ಯಾದವ್ 3, ಮಾರ್ಕೆಲ್ 2 ಹಾಗೂ ರಸೂಲ್ 1 ವಿಕೆಟ್ ಪಡೆದಿದ್ದಾರೆ.