ಕ್ರೀಡೆ

ಮಾಜಿ ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು ಜೋನಿ ಅನುಮಾನಾಸ್ಪದ ಸಾವು

ಮಾಜಿ ರೂಪದರ್ಶಿ, ನೀಲಿ ಚಿತ್ರತಾರೆ ಹಾಗೂ ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು 45 ವರ್ಷದ ಜೋನಿ ಲಾರೆರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ...

ಮಾಜಿ ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು ಜೋನಿ ಅನುಮಾನಾಸ್ಪದ ಸಾವು
ಜೋನಿ ಲಾರೆರ್
Published On :

ಕ್ಯಾಲಿಫೋರ್ನಿಯಾ: ಮಾಜಿ ರೂಪದರ್ಶಿ, ನೀಲಿ ಚಿತ್ರತಾರೆ ಹಾಗೂ ಡಬ್ಲೂಡಬ್ಲೂಇ ಮಹಿಳಾ ಕುಸ್ತಿಪಟು 45 ವರ್ಷದ ಜೋನಿ ಲಾರೆರ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಶಂಕಾಸ್ಪದವಾಗಿ ಜೋನಿ ಸಾವಿಗೀಡಾಗಿದ್ದು, ಅವರು ಮೃತಪಟ್ಟಿರುವ ವಿಷಯವನ್ನು ಅವರದ್ದೇ ಟ್ವೀಟರ್ ನಲ್ಲಿ ಪ್ರಕಟಿಸಲಾಗಿದೆ. ಆಕೆಯ ಸಾವಿನ ಹಿಂದಿನ ಕಾರಣ ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಡಬ್ಲೂಡಬ್ಲೂಇನಲ್ಲಿ ಚಿನಾ ಎಂದೇ ಖ್ಯಾತಿ ಗಳಿಸಿದ್ದ ಜೋನಿ ನಿರಂತರ 231 ದಿನ ಡಬ್ಲೂಡಬ್ಲೂಇ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದರು. ಎರಡು ಬಾರಿ ಇಂಟರ್ ಕಾಂಟಿನೆಂಟಿಲ್ ಟ್ರೋಫಿ ಗೆದ್ದ ವಿಶ್ವದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು, ಅದೇ ರೀತಿ ದ ಸುರ್ರೆಲ್ ಲೈಫ್ ಹಾಗೂ ಸೆಲೆಬ್ರಿಟಿ ರೆಹಾಬ್ ವಿತ್ ಡ್ರ್ಯೂ ಜೋನಿಗೆ ಹೆಸರು ತಂದ ರಿಯಾಲಿಟಿ ಶೋಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.