ಪಾಕಿಸ್ತಾನ ಕ್ರಿಕೆಟ್ ದಂತಕಥೆ ಹನೀಫ್ ಮುಹಮ್ಮದ್ ನಿಧನ

ಏಷ್ಯಾದ ಬ್ರಾಡ್ಮನ್‌ ಎಂದೇ ಖ್ಯಾತಿ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ದಂತಕತೆ ಹನೀಫ್‌ ಮುಹಮ್ಮದ್‌...
ಹನೀಫ್ ಮುಹಮ್ಮದ್ (ಸಂಗ್ರಹ ಚಿತ್ರ)
ಹನೀಫ್ ಮುಹಮ್ಮದ್ (ಸಂಗ್ರಹ ಚಿತ್ರ)
Updated on
ಕರಾಚಿ: ಏಷ್ಯಾದ ಬ್ರಾಡ್ಮನ್‌ ಎಂದೇ ಖ್ಯಾತಿ ಗಳಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ದಂತಕತೆ ಹನೀಫ್‌ ಮುಹಮ್ಮದ್‌ ನಿನ್ನೆ(ಗುರುವಾರ) ನಿಧನರಾಗಿದ್ದಾರೆ. 81 ವರ್ಷದ ಹನೀಫ್‌ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಹನೀಫ್‌ ಅವರ ನಿಧನವನ್ನು ಕರಾಚಿಯ ಆಗಾ ಖಾನ್‌ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ. ಇದಕ್ಕೂ ಮೊದಲು ಹನೀಫ್‌ ಅವರ ಹೃದಯ ಬಡಿತ ಸುಮಾರು 6 ನಿಮಿಷಗಳ ಕಾಲ ನಿಂತು ಹೋಗಿತ್ತು. ಇದರಿಂದ ಹನೀಫ್‌ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರೂ ಘೋಷಿಸಿದ್ದರು. 
6 ನಿಮಿಷಗಳ ನಂತರ ಹನೀಫ್‌ ಅವರ ಹೃದಯ ಬಡಿತ ಹೊಡೆದುಕೊಳ್ಳಲು ಶುರುವಿಟ್ಟುಕೊಂಡಿತ್ತು. ಇದಾದ ಬಳಿಕ ಹನೀಫ್‌ ಅವರ ಮಗ ಶೋಯಬ್‌ ತಮ್ಮ ತಂದೆ ಇನ್ನೂ ಜೀವಂತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಆದರೆ ಇದೀಗ ಹನೀಫ್‌ ಅವರು ಮೃತಪಟ್ಟಿರುವುದಾಗಿ ವೈದ್ಯ ಮೂಲಗಳು ಖಚಿತ ಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com