

ನವದೆಹಲಿ: 2014 ರಲ್ಲಿ ಜಾರಿಗೆ ತರಲಾಗಿದ್ದ ಐಸಿಸಿಯ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಐಸಿಸಿ ನಿರ್ಧರಿಸಿದೆ. ಎನ್.ಶ್ರೀನಿವಾಸನ್ ಅವಧಿಯಲ್ಲಿ ಜಾರಿಗೆ ಬಂದಿದ್ದ ಬಿಗ್ ತ್ರಿ ಪ್ರಭುತ್ವ ನಿಯಮವನ್ನು ಕೈಬಿಟ್ಟು ಸ್ವಾಯತ್ತ ಚೇರ್ಮನ್ ನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.
2016ರ ಜುಲ್ಯೆನಿ೦ದ 2 ವರ್ಷದ ಅವಧಿಗೆ ಐಸಿಸಿಗೆ ಹೊಸ ಚೇಮ೯ನ್ ಆಯ್ಕೆಯಾಗಲಿದ್ದು, ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನ ಅಧ್ಯಕ್ಷ ಶರದ್ ಪವಾರ್ ಬದಲಾವಣೆಯ ನಂತರ ಆಯ್ಕೆಯಾಗಲಿರುವ ಮೊದಲ ಚೇರ್ಮನ್(ಅಧ್ಯಕ್ಷ)ರಾಗಲಿದ್ದಾರೆ.
ಮು೦ದಿನ ಐಸಿಸಿ ಚೇರ್ಮನ್ ಆಗುವ ವ್ಯಕ್ತಿ ತವರಿನ ಮ೦ಡಳಿಯ ಯಾವುದೇ ಸ್ಥಾನ ಹೊ೦ದಿರುವ೦ತಿಲ್ಲ ಎನ್ನುವ ನಿಯಮ ಮಾಡಲಾಗಿದೆ. ಅಲ್ಲದೆ, ಚೇರ್ಮನ್ 2 ವಷ೯ದ ಮೂರು ಅವಧಿಗಳಿಗೆ ಮಾತ್ರ ಈ ಹುದ್ದೆಯನ್ನು ವಹಿಸಿಕೊಳ್ಳಬಹುದಾಗಿದೆ.