

ಬೆಂಗಳೂರು: ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹರಾಜು ಪ್ರಕ್ರಿಯೆ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡು ಕೆಲ ಹೊತ್ತು ಕಳೆದಿವೆ.
ಕಳೆದ ಐಪಿಎಲ್ ನಲ್ಲಿ 16 ಕೋಟಿ ರೂಪಾಯಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಬಿಕರಿಯಾಗಿದ್ದ ಯುವರಾಜ್ ಸಿಂಗ್ ಈ ಬಾರಿ 2 ಕೋಟಿ ರೂಪಾಯಿ ಮೂಲ ಬೆಲೆಗೆ ನಿಗದಿಯಾಗಿದ್ದಾರೆ. ಇನ್ನು ಇಶಾಂತ್ ಶರ್ಮಾ ಸೇರಿದಂತೆ ಒಟ್ಟು 7 ಆಟಗಾರರಿಗೆ ಇದೇ ಮೊತ್ತ ನಿಗದಿಯಾಗಿದೆ.