ಸಂಬಂಧಗಳ ಬಗ್ಗೆ ಮಾತನಾಡಲು ನಾನು ಆಪ್ತಸಲಹೆಗಾರನಲ್ಲ: ಕೊಹ್ಲಿ

Published On :
ಮುಂಬೈ: ಮಂಗಳವಾರ ಮುಂಬೈ ನಡೆದ ಕಾರ್ಯಕ್ರಮವೊಂದರಲ್ಲಿ ದುಬಾರಿ ವಾಚ್ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರನ್ನು ಘೋಷಣೆ ಮಾಡಲಾಗಿತ್ತು.
ಈ ಕಾರ್ಯಕ್ರಮಕ್ಕೆ ಆಗಮಿಸಿದ ಪತ್ರಕರ್ತರು ಕೊಹ್ಲಿ ಅವರಲ್ಲಿ ನೀವು ವಾಚ್‌ನ್ನು ಯಾವ ಬಾಲಿವುಡ್ ಸೆಲೆಬ್ರಿಟಿಗೆ ಗಿಫ್ಟ್ ನೀಡಲು ಇಚ್ಛಿಸುತ್ತಿದ್ದೀರಿ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೊಹ್ಲಿ, ನಾನು ನನ್ನ ಕುಟುಂಬದವರಿಗೆ ಮೊದಲು ಗಿಫ್ಟ್ ಕೊಡಲು ಬಯಸುತ್ತೇನೆ. ಈ ಪ್ರಶ್ನೆಯನ್ನು ಯಾಕೆ ಇಲ್ಲಿ ಕೇಳಿದಿರಿ? ಎಂಬುದು ನನಗೆ ಅರ್ಥವಾಗುತ್ತಿಲ್ಲ. ಅದಕ್ಕೂ ಇದಕ್ಕೂ ಸಂಬಂಧವೇನು? ಕೆಲವೊಮ್ಮೆ ನಮ್ಮ ಕ್ರಿಕೆಟ್ ತಂಡದಲ್ಲಿ ಯಾರಿಗಾದರೂ ಗಿಫ್ಟ್ ಕೊಡಬಹುದು. ಏನೋ ಕೇಳುವ ನೆಪದಲ್ಲಿ ಇನ್ನೇನನ್ನೋ ಕೇಳ ಬೇಡಿ ಎಂದಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪತ್ರಕರ್ತರು ತಮ್ಮ ಮುಂದಿನ ಸಂಬಂಧಗಳ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ, ಯಾರೊಂದಿಗಿನ ಸಂಬಂಧ? ಯಾರ ಜತೆಗೆ? ನಾನು ಸಂಬಂಧಗಳ ಬಗ್ಗೆ ಹೇಳುವ ಆಪ್ತಸಲಹೆಗಾರನಲ್ಲ. ಇಂಥಾ ಪ್ರಶ್ನೆಗಳನ್ನು ನನ್ನಲ್ಲಿ ಕೇಳಬೇಡಿ, ತಜ್ಞರಲ್ಲೇ ಕೇಳಿ ಎಂದು ಕೊಹ್ಲಿ ಉತ್ತರ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


