ಸಾನಿಯಾಗಿಲ್ಲ ಒಲಿಂಪಿಕ್ ಪಾರ್ಟನರ್ ಗಳ ಚಿಂತೆ

ಇತ್ತೀಚಿಗಷ್ಟೇ ವಿಶ್ವ ಟೆನಿಸ್ ಮಹಿಳೆಯರ ಡಬಲ್ಸ್ ನಲ್ಲಿ ಸತತ 40 ಪಂದ್ಯಗಳಲ್ಲಿ ಜಯ ಸಾಧಿಸಿರುವ ನಂಬರ್ 1 ಜೋಡಿ ಸಾನಿಯಾ ಮಿರ್ಜಾ ಹಾಗೂ...
ಸಾನಿಯಾ ಮಿರ್ಜಾ
ಸಾನಿಯಾ ಮಿರ್ಜಾ
Updated on: 
ಬೆಂಗಳೂರು: ಇತ್ತೀಚಿಗಷ್ಟೇ ವಿಶ್ವ ಟೆನಿಸ್ ಮಹಿಳೆಯರ ಡಬಲ್ಸ್ ನಲ್ಲಿ ಸತತ 40 ಪಂದ್ಯಗಳಲ್ಲಿ ಜಯ ಸಾಧಿಸಿರುವ ನಂಬರ್ 1 ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಇದೀಗ ಫ್ರೆಂಚ್ ಓಪನ್ ಮೇಲೆ ಕಣ್ಣು ಹಾಕಿದೆ.
ಪ್ರಚಾರಾರ್ಥ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಆಗಮಿಸಿದ್ದ ಸಾನಿಯಾ ಮಿರ್ಜಾ, ಸ್ವಿಸ್ ತಾರೆ ಮಾರ್ಟಿನಾ ಹಿಂಗಿಸ್ ಜತೆಗಿನ ಗೆಳೆತನ, ಸತತ ಗೆಲುವಿನ ಓಟದ ಬಗ್ಗೆ, ಒಲಿಂಪಿಕ್ ಹಾಗೂ ಫ್ರೆಂಚ್ ಓಪನ್ ಇನ್ನೂ ಮರೀಚಿಕೆಯಾಗಿರುವುದರ ಬಗ್ಗೆ ಮಾತನಾಡಿದರು.
ಸದ್ಯ ರಿಯೋ ಡಿ ಜನೈರೊ ಒಲಿಂಪಿಕ್ ಬಗ್ಗೆ ಗಮನ ಹರಿಸಿರುವ ಸಾನಿಯಾ, ಒಲಿಂಪಿಕ್ ಪಾರ್ಟನರ್ ಬಗ್ಗೆ ತಮಗೆ ಚಿಂತೆ ಇಲ್ಲ. ಅ ಬಗ್ಗೆ ಚಿಂತಿಸಲು ಇನ್ನೂ ಸಮಯ ಇದೆ. ಅಲ್ಲಿ ಸಾಕಷ್ಟು ಬದಲಾವಣೆಯಾಗುವ ಸಾಧ್ಯತೆ ಇರುತ್ತೆ. ಆ ಬಗ್ಗೆ ವಿಚಾರ ಮಾಡಲು ಇದು ಸೂಕ್ತ ಸಮಯ ಅಲ್ಲ ಅಂತ ಅನಿಸುತ್ತದೆ ಎಂದರು.
ಈಗಾಗಲೇ ಡಬಲ್ಸ್ ನಲ್ಲಿ ಎಲ್ಲ ಗ್ರ್ಯಾಂಡ್ ಸ್ಲ್ಯಾಂ ಗೆದ್ದಿರುವ ನಮಗೆ ಫ್ರೆಂಚ್ ಓಪನ್ ಎಂಬುದು ಇನ್ನೂ ಗಗನ ಕುಸುಮವಾಗಿದೆ. ಹಾಗಾಗಿ ನಮ್ಮ ಮುಂದಿನ ಗುರಿ ಫ್ರೆಂಚ್ ಓಫನ್ ಗೆಲ್ಲುವುದು ಆಗಿದೆ. ಸದ್ಯ ದೋಹಾ ಓಪನ್ ಹಾಗೂ ರಿಯೋ ಒಲಿಂಪಿಕ್ ನನ್ನ ಮುಂದಿನ ಗುರಿಯಾಗಿದ್ದು, ಅದಕ್ಕಾಗಿ ಸಿದ್ಧತೆ ನಡೆಸುತ್ತಿರುವುದಾಗಿ ಸಾನಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com