2015 ವಿಶ್ವಕಪ್ ವೇಳೆ ಮಹಿಳೆಯೊಂದಿಗೆ ಕ್ರಿಸ್ ಗೇಲ್ ಅನುಚಿತ ವರ್ತನೆ

ಚಾನೆಲ್ 10 ಸುದ್ದಿವಾಹಿನಿಯ ಮಹಿಳಾ ವರದಿಗಾರ್ತಿ ಮೆಲ್ ಮೆಲಾಫಿನ್ನೊಂದಿಗೆ ಅಸಭ್ಯವಾಗಿ ಮಾತನಾಡಿದ್ದ ವೆಸ್ಟ್ ಇಂಡೀಸ್ ...
ಕ್ರಿಸ್ ಗೇಲ್
ಕ್ರಿಸ್ ಗೇಲ್
Updated on: 
ನವದೆಹಲಿ: ಚಾನೆಲ್ 10 ಸುದ್ದಿವಾಹಿನಿಯ ಮಹಿಳಾ ವರದಿಗಾರ್ತಿ ಮೆಲ್ ಮೆಲಾಫ್ಲಿನ್ ನೊಂದಿಗೆ  ಅಸಭ್ಯವಾಗಿ ಮಾತನಾಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಇದೀಗ ಮತ್ತೊಬ್ಬ ಮಹಿಳೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದಾರೆ ಎಂಬುದು ಸುದ್ದಿಯಾಗಿದೆ.
2015 ರ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ವೆಸ್ಟ್ ಇಂಡೀಸ್ ತಂಡದೊಂದಿಗೆ ಕೆಲಸ ಮಾಡುತ್ತಿದ್ದ ಆಸ್ಟ್ರೇಲಿಯಾದ ಮಹಿಳೆ ಗೇಲ್ನ ಅನುಚಿತ ವರ್ತನೆಯನ್ನು ಬಹಿರಂಗ ಪಡಿಸಿದ್ದಾಳೆ.
ಕ್ರಿಕೆಟಿಗರಿಗೆ ಸ್ಯಾಂಡ್ವಿಚ್ ನೀಡಲೆಂದು ರೂಂಗೆ ಹೋದಾಗ ಅಲ್ಲಿ ಕ್ರಿಸ್ ಗೇಲ್ ಮತ್ತು ಇನ್ನೊಬ್ಬ ಕ್ರಿಕೆಟಿಗ ಉಪಸ್ಥಿತರಿದ್ದರೆನ್ನಲಾಗಿದೆ. ಆ ಹೊತ್ತು ಬರೀ ಟವೆಲ್ ಉಟ್ಟುಕೊಂಡಿದ್ದ ಗೇಲ್ ಟವೆಲ್ನ್ನು ಜಾರಿಸಿ ಗುಪ್ತಾಂಗವನ್ನು ತೋರಿಸಿ ನೀನು ಇದನ್ನು ಹುಡುಕುತ್ತಿದ್ದೀಯಾ ? ಎಂದು ಕೇಳಿರುವುದಾಗಿ ಮಹಿಳೆ ಹೇಳಿದ್ದಾಳೆ.
ಈ ಘಟನೆಯ ಬಗ್ಗೆ ವೆಸ್ಟ್ ಇಂಡೀಸ್ ಟೀಂ ಮ್ಯಾನೇಜರ್ ರಿಚಿ ರಿಚಾಡ್ಸನ್ ಅವರಿಗೆ ತಿಳಿಸಿದ್ದು, ಅವರು ಗೇಲ್ ಹೆಸರನ್ನು ಉಲ್ಲೇಖಿಸದೆ ತನ್ನ ತಂಡಗಳಿಗೆ ಇಮೇಲ್ ಮಾಡಿ ಮಹಿಳೆಯರಿಗೆ ಗೌರವ ನೀಡಿ ಎಂದು ಹೇಳಿದ್ದರು.
ತನ್ನ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಆ ಮಹಿಳೆ  ಬಿಗ್ ಬ್ಯಾಶ್ ಲೀಗ್ (ಬಿಬಿಎಲ್)ವೇಳೆ ಮೆಲ್ ಮೆಲಾಫ್ಲಿನ್  ಜತೆ ಗೇಲ್ ಅನುಚಿತವಾಗಿ ವರ್ತಿಸಿದ ನಂತರ ತನಗೆ ತನ್ನ ಕಥೆಯನ್ನು ಬಹಿರಂಗಪಡಿಸಬೇಕೆಂದೆನಿಸಿತು ಎಂದಿದ್ದಾಳೆ.
ಬಿಬಿಎಲ್ ಪಂದ್ಯದ ವೇಳೆ ವರದಿಗಾರ್ತಿಗೆ ತನ್ನೊಂದಿಗೆ ಕುಡಿಯಲು ಬರ್ತೀಯಾ? ಎಂದು ಕೇಳಿದ ಗೇಲ್, ತಕ್ಷಣವೇ ಡೋಂಟ್ ಬ್ಲಷ್ ಬೇಬಿ ಎಂದು ಹೇಳಿ ನಕ್ಕಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com