ಪರ್ತ್: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಭಾರತ 309 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ.
ಪರ್ತ್ ನಲ್ಲಿ ನಡೆಯುತ್ತಿರುವ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 309 ರನ್ ಗಳ ಕಳೆ ಹಾಕಿದ್ದು, ಆಸ್ಟ್ರೇಲಿಯಾಗೆ 310 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ನಿಗದಿತ ಓವರ್ ಗಳಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಿತು. ಆಸ್ಟ್ರೇಲಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅಜೇಯ 171 ರನ್ ಗಳಿಸಿ ಮಿಂಚಿದರು. ಇವರಿಗೆ ದ್ವಿಶತಕದ ಜತೆಯಾಟದಲ್ಲಿ ಸಾತ್ ನೀಡಿದ ವಿರಾಟ್ ಕೊಹ್ಲಿ (91) ಶತಕದಂಚಿನಲ್ಲಿ ಎಡವಿ ಶತಕ ವಂಚಿತರಾದರು.
ಟೀಂ ಇಂಡಿಯಾ ಪರ ಶಿಖರ್ ಧವನ್ 91, ಎಂಎಸ್ ಧೋನಿ 18, ರವೀಂದ್ರ ಜಡೇಜಾ ಅಜೇಯ 10 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾ ಪರ ಫಾಲ್ಕ್ನರ್ (2) ಮತ್ತು ಹ್ಯಾಸಲ್ ವುಡ್ (1) ವಿಕೆಟ್ ಪಡೆದರು.