ಕ್ವಾರ್ಟರ್ ಫೈನಲ್ ಗೆ ಸಾನಿಯಾ ಜೋಡಿ

ವಿಶ್ವದ ಅಗ್ರ ಮಹಿಳಾ ಡಬಲ್ಸ್ ಜೋಡಿಯಾದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲೂ ತಮ್ಮ ಜೈತ್ರಯಾತ್ರೆ ಮುಂದುವರಿಸಿದ್ದಾರೆ...
ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ)
ಸಾನಿಯಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ (ಸಂಗ್ರಹ ಚಿತ್ರ)

ಸಿಡ್ನಿ: ವಿಶ್ವದ ಅಗ್ರ ಮಹಿಳಾ ಡಬಲ್ಸ್ ಜೋಡಿಯಾದ ಭಾರತದ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್, ಸಿಡ್ನಿ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲೂ ತಮ್ಮ ಜೈತ್ರಯಾತ್ರೆ ಮುಂದುವರಿಸಿದ್ದಾರೆ.

ಮಂಗಳವಾರ ನಡೆದ ಸಿಡ್ನಿ ಟೂರ್ನಿಯ ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತಸ್ವಿಜರ್ಲೆಂಡ್ ಜೋಡಿ, ಆಸ್ಟ್ರೇಲಿಯಾದ ಅನಾಸ್ತೇನಿಯಾ ರೊಡಿನೊವಾ ಹಾಗೂ ಅರಿನಾ  ರೊಡಿ ನೊವಾ ಸೋದರಿಯರನ್ನು 62, 63 ಸೆಟ್ಗಳ ಅಂತರದಲ್ಲಿ ಮಣಿಸಿ, ಟೂರ್ನಿಯ 8ರ ಘಟ್ಟಕ್ಕೆ ಪ್ರವೇಶ ಪಡೆಯುವುದರೊಂದಿಗೆ ಸತತ 27ನೇ ಜಯ ಪಡೆಯಿತು. ಇತ್ತ ಭಾರತದ ರೋಹನ್ ಬೋಪಣ್ಣ, ಪುರುಷರ ಡಬಲ್ಸ್ ವಿಭಾಗದಲ್ಲಿ ತಮ್ಮ ಜತೆಗಾರ ಫ್ಲಾರಿನ್ ಮರ್ಜಿಯಾ ಜತೆ, ಉಜ್ಬೇಕಿಸ್ತಾನದ ಡೆನಿಸ್ , ಫಿನ್ಲೆಂಡ್‍ನ ಹೆನ್ರಿ ಕಾಂಟಿನೆನ್ ಜೋಡಿ ವಿರುದ್ಧ 67 (27), 63, 108  ಸೆಟ್ಗಳ ಅಂತರದಲ್ಲಿ ಜಯಿಸಿ, ಕ್ವಾರ್ಟರ್ ಫೈನಲ್‍ಗೆ ಕಾಲಿಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com