ಗಾಲ್ಫ್ ವಾಣಿಗೆ ಪ್ರಶಸ್ತಿ

ಹೀರೋ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿಯ ಫೈನಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯದ ವಾಣಿ ಕಪೂರ್...
ವಾಣಿ ಕಪೂರ್
ವಾಣಿ ಕಪೂರ್
ಅಹ್ಮದಾಬಾದ್: ಹೀರೋ ಮಹಿಳೆಯರ ವೃತ್ತಿಪರ ಗಾಲ್ಫ್ ಟೂರ್ನಿಯ ಫೈನಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ ರಾಜ್ಯದ ವಾಣಿ ಕಪೂರ್, ಫೈನಲ್ ಪಂದ್ಯದಲ್ಲಿ 73 ಅಂಕಗಳನ್ನು ಗಳಿಸುವ ಮೂಲಕ ಪ್ರಶಸ್ತಿಗೆ ಭಾಜನರಾದರು. 
ಇಲ್ಲಿನ ಕಲ್ಹಾರ್ ಬ್ಲೂಸ್ ಆ್ಯಂಡ್ ಗ್ರೀನ್ಸ್ ಗಾಲ್ಫ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನಲ್ಲಿ ಇಂಗ್ಲೆಂಡ್ ಮೂಲದ ಕಿರಣ್ ಅವರನ್ನು ಹಿಂದಿಕ್ಕಿದ ವಾಣಿ, ಪ್ರಶಸ್ತಿಗೆ ಭಾಜನರಾದರು. 
ಈ ಗೆಲವಿನೊಂದಿಗೆ ಪಾರಿತೋಷಕ ಹಾಗೂ ರು. 7 ಲಕ್ಷ ನಗದು ಬಹುಮಾನವನ್ನು ವಾಣಿ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್ದೀಪ್ ದಲ್ ಅವರು, ಒಟ್ಟಾರೆಯಾಗಿ 218 ಅಂಕ ಗಳಿಸಿದ ಮೂರನೇ ಸ್ಥಾನ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com