

ಕೊಲಂಬೊ: ಶ್ರೀಲಂಕಾ ಆರಂಭಿಕ ಬ್ಯಾಟ್ಸ್‍ಮನ್ಗಳಾದ ಕುಶಾಲ್ ಪೆರೇರಾ ಹಾಗೂ ರಂಗನಾ ಹೆರಾತ್‍ಗೆ ಮೋಸದಾಟವಾಡುವಂತೆ ಆಮಿಷ ತೋರಿಸಿದ ಆರೋಪ ಎದುರಿಸುತ್ತಿರುವ ತಂಡದ ವೇಗದ ಬೌಲಿಂಗ್ ಕೋಚ್ ಅನುಷಾ ಸಮರನಾಯಕೆ ಅವರನ್ನು ಅವರ ಹುದ್ದೆಯಿಂದ ಎರಡು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರುವಂತೆ ಆಮಿಷವೊಡ್ಡಲು ಅನುಷಾ ಯತ್ನಿಸಿದ್ದರೆನ್ನಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ತಿಲಂಗಾ ಸುಮತಿ ಪಾಲಾ, ತನಿಖಾ ವರದಿಯನ್ವಯ ಈ ಕ್ರಮ ಕೈಗೊಂಡಿದ್ದಾರೆ.