ಎಲ್ಲರ ಕಣ್ಣು ಜೊಕೊ-ಫೆಡರರ್ ಮೇಲೆ

ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಅಂತಿಮ ದಿನಗಳು ಸನ್ನಿಹಿತವಾಗಿರುವಂತೆ ದಿಗ್ಗಜರ ಕಾದಾಟಕ್ಕೆ ವೇದಿಕೆ...
ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್
ರೋಜರ್ ಫೆಡರರ್ ಮತ್ತು ನೊವಾಕ್ ಜೊಕೊವಿಚ್
Updated on: 

ಮೆಲ್ಬೋರ್ನ್: ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಅಂತಿಮ ದಿನಗಳು ಸನ್ನಿಹಿತವಾಗಿರುವಂತೆ ದಿಗ್ಗಜರ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ.

ಪಂದ್ಯಾವಳಿಯ ಹನ್ನೊಂದನೇ ದಿನದಂದು ಹಾಲಿ ಚಾಂಪಿಯನ್, ಸರ್ಬಿಯಾದ ನೊವಾಕ್ ಜೊಕೊವಿಚ್ ಮತ್ತು ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ ರೋಜರ್ ಫೆಡರರ್ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ.

ರಾಡ್ ಲೇವರ್ ಅರೇನಾದಲ್ಲಿ ನಡೆಯಲಿರುವ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸೆಮಿಫೈನಲ್ ನಲ್ಲಿ ಈ ಇಬ್ಬರು ದಿಗ್ಗಜರ ಸೆಣಸಾಟವನ್ನು ಕಣ್ತುಂಬಿಕೊಳ್ಳಲು ವಿಶ್ವ ಟೆನಿಸ್ ಪ್ರಿಯರು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನೊಂದೆಡೆ, ಈ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆಯಲು ಇವರೀರ್ವರೂ ಮುಂದಾಗಿದ್ದಾರೆ. ಆರು ಬಾರಿ ಆಸ್ಟ್ರೇಲಿಯಾ ಓಪನ್ ಗೆದ್ದು ಇತಿಹಾಸ ಬರೆದಿರುವ ಆಸ್ಟ್ರೇಲಿಯಾದ ರಾಯ್ ಎಮರ್ ಸನ್ ಅವರ ದಾಖಲೆಯನ್ನು ಸರಿಗಟ್ಟಲು ಫೆಡರರ್ ಮತ್ತು ಜೊಕೊವಿಚ್ ತುಡಿಯುತ್ತಿದ್ದಾರೆ. 2012ರಿಂದ ಇಲ್ಲಿಯವರೆಗೆ ಗ್ರಾಂಡ್ ಸ್ಲಾಮ್  ಪ್ರಶಸ್ತಿಯನ್ನು ಗೆಲ್ಲಲು ವಿಫಲವಾಗಿರುವ ರೋಜರ್ ಫೆಡರರ್, ವೃತ್ತಿಬದುಕಿನ 18ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಾಗಿ ಹೋರಾಟ ಮುಂದುವರೆಸಿದ್ದಾರೆ.

ಆದರೆ, ಜೊಕೊವಿಚ್ ಪ್ರಚಂಡ ಫಾರ್ಮ್ ನಲ್ಲಿದ್ದು ಅವರು ಮತ್ತೊಮ್ಮೆ ಸ್ವಿಸ್ ಆಟಗಾರನಿಗೆ ಪ್ರಬಲ ಸವಾಲೊಡ್ಡುವ ಸಾಧ್ಯತೆ ಇದೆ.ಫೆಡರರ್ ಮತ್ತು ಜೊಕೊವಿಚ್ ನಡುವೆ ಇಲ್ಲಿಯವರೆಗೆ 44 ಪಂದ್ಯಗಳು ಜರುಗಿದ್ದು, ಓಪನ್ ಯುಗದಲ್ಲಿ ಇದು ಎರಡನೇ ಗರಿಷ್ಠ ಪೈಪೋಟಿ ಎನಿಸಿದೆ.
ಇನ್ನು ಜೊಕೊವಿಚ್ ಮತ್ತು ರಾಫೆಲ್ ನಡಾಲ್ ನಡುವೆ 47 ಬಾರಿ ಕಾದಾಟ ನಡೆದಿರುವುದು ಮೊದಲ ಸ್ಥಾನ ಪಡೆದಿದೆ. ಫೆಡರರ್ ಮತ್ತು ನಡಾಲ್ ಈ ಇಬ್ಬರ ವಿರುದ್ಧವೂ ಮೇಲುಗೈ ಸಾಧಿಸಿರುವುದು ಜೊಕೊವಿಚ್ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. ಸದ್ಯಕ್ಕೆ ಜೊಕೊವಿಚ್ ವಿಶ್ವದ ನಂಬರ್ ಒನ್ ಆಟಗಾರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com