ಮುಂಬೈ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲು

ಉತ್ತಮ ಲಯ ಕಂಡುಕೊಂಡಿದ್ದರು ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 23-24 ಅಂಕಗಳಿಂದ ಸೋಲು ಕಂಡಿದೆ...
ಯು ಮುಂಬಾ
ಯು ಮುಂಬಾ
Updated on

ಪಾಟ್ನಾ: ಉತ್ತಮ ಲಯ ಕಂಡುಕೊಂಡಿದ್ದರು ಬೆಂಗಳೂರು ಬುಲ್ಸ್ ತಂಡ ಯು ಮುಂಬಾ ವಿರುದ್ಧ 23-24 ಅಂಕಗಳಿಂದ ಸೋಲು ಕಂಡಿದೆ.

ಪ್ರೊ ಕಬಡ್ಡಿ ಲೀಗ್ 4ನೇ ಆವೃತ್ತಿಯ ಪಾಟ್ನಾ ಚರಣದಲ್ಲಿ  ಬೆಂಗಳೂರು ತಂಡ ಸತತ ಎರಡನೇ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿದೆ.

ಪಾಟಲಿಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸುರೇಂದರ್ ನಾಡಾ ನೇತೃತ್ವದ ಬುಲ್ಸ್ ತಂಡ ಆರಂಭಿದಿಂದಲೂ ಮುನ್ನಡೆ ಕಾಯ್ದುಕೊಂಡಿತ್ತು. ಮೊದಲಾರ್ಧ ಮುಗಿಯುವ ವೇಳೆಗೆ 14-8 ಅಂಕಗಳಿಂದ ಭಾರೀ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಮುಂಬೈ ಆಟಗಾರರು ನೀಡಿದ ತಿರುಗೇಟಿಗೆ ಬುಲ್ಸ್ ಮಕಾಡೆ ಮಲಗಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com