ಮೂರನೇ ವಿವಾಹವಾದ ಬ್ರೆಜಿಲ್ ಫುಟ್ ಬಾಲ್ ದಂತಕತೆ ಪೀಲೆ!

ಬ್ರಿಜಿಲ್ ಫುಟ್​ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂರನೇ ವಿವಾಹವಾದ ಪೀಲೆ (ಸಂಗ್ರಹ ಚಿತ್ರ)
ಮೂರನೇ ವಿವಾಹವಾದ ಪೀಲೆ (ಸಂಗ್ರಹ ಚಿತ್ರ)

ರಿಯೋ ಡಿ ಜನೈರೊ: ಬ್ರಿಜಿಲ್ ಫುಟ್​ಬಾಲ್ ದಂತಕತೆ ಪೀಲೆ 75 ರ ವಯಸ್ಸಿನಲ್ಲಿ ಮೂರನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹುಕಾಲದ ಗೆಳತಿ ಮರ್ಸಿಯಾ ಸಿಬೆಲಾ  ಅಒಕಿಯನ್ನು ವರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ವತಃ ಪೀಲೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕೆಲವೇ ಆಪ್ತರ ಸಮ್ಮುಖದವಲ್ಲಿ ವಿವಾಹವಾಗಿರುವುದಾಗಿ ಪೀಲೆ ಹೇಳಿಕೊಂಡಿದ್ದಾರೆ. 1980ರಲ್ಲಿ ನ್ಯೂಯಾರ್ಕ್ ನಲ್ಲಿ ಪೀಲೆ ಮತ್ತು  ಅಒಕಿ ಪರಸ್ಪರ ಎದುರಾಗಿದ್ದರು. ಆದರೆ ಬಳಿಕ ಈ ಜೋಡಿ ಮತ್ತೆ ಎದುರಾಗಿದ್ದು 2010ರಲ್ಲಿ. ಸಾವೋ ಪೋಲೋದಲ್ಲಿ ಮಾಲ್ ಒಂದರ ಎಲಿವೇಟರ್ ನಲ್ಲಿ ಪೀಲೆ ಮತ್ತು ಅಒಕಿ ಮತ್ತೆ  ಎದುರಾಗಿದ್ದೆವು ಎಂದು ಪೀಲೆ ಹೇಳಿದ್ದಾರೆ.

ನಂತರ 2012ರಂದು ಮೊನಾಕೊದಲ್ಲಿ ನಡೆದ ಫುಟ್​ಬಾಲ್ ಪ್ರಶಸ್ತಿ ಸಮಾರಂಭದಲ್ಲಿ 42 ವರ್ಷದ ಮರ್ಸಿಯಾರನ್ನು ಪರಿಚಯ ಮಾಡಿಕೊಂಡಿದ್ದ ಪೀಲೆ, ಕಳೆದ ಆರು ವರ್ಷಗಳಿಂದ ಮರ್ಸಿಯಾ  ಜತೆಗೆ ಡೇಟಿಂಗ್ ನಡೆಸುತ್ತಿದ್ದರು. ಇದೀಗ ಅಧಿಕೃತವಾಗಿ ಮರ್ಸಿಯಾರನ್ನು ವಿವಾಹವಾಗಿದ್ದಾರೆ. ಇನ್ನು ಮೊದಲ ಪತ್ನಿ ರೋಸಿಮೇರಿ ಜತೆಗೆ ಪೀಲೆ ಹನ್ನೆರಡು ವರ್ಷ ಜೀವನ ಸಾಗಿಸಿದ್ದು, ಅವರ  ಎರಡನೇ ಪತ್ನಿ ಗಾಯಕಿ ಅಸ್ಸಿರಿಯಾ ನೆಸಿಮೆಂಟೋ ಜತೆಗೆ ಹದಿನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com