ಕ್ರೀಡೆ

ಜುಲೈ 16ರಂದು ದೆಹಲಿಯಲ್ಲಿ ಕೆರ್ರಿ ಹೋಪ್ ವರ್ಸಸ್ ವಿಜೇಂದರ್ ಸಿಂಗ್ ಫೈಟ್

ವೃತ್ತಿಪರ ಬಾಕ್ಸಿಂಗ್​ನಲ್ಲಿ ಸತತ 6 ಅಮೋಘ ಜಯಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರಂದು ನಡೆಯಲಿರುವ ಪಂದ್ಯದಲ್ಲಿ ಕೆರ್ರಿ ಹೋಪ್ ಅವರೊಂದಿಗೆ ಸೆಣೆಸಲಿದ್ದಾರೆ...

ಜುಲೈ 16ರಂದು ದೆಹಲಿಯಲ್ಲಿ ಕೆರ್ರಿ ಹೋಪ್ ವರ್ಸಸ್ ವಿಜೇಂದರ್ ಸಿಂಗ್ ಫೈಟ್
ವಿಜೇಂದರ್ ಸಿಂಗ್ ಹಾಗೂ ಕೆರ್ರಿ ಹೋಪ್ (ಸಂಗ್ರಹ ಚಿತ್ರ)
Published On :

ನವದೆಹಲಿ: ವೃತ್ತಿಪರ ಬಾಕ್ಸಿಂಗ್​ನಲ್ಲಿ ಸತತ 6 ಅಮೋಘ ಜಯಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರಂದು ನಡೆಯಲಿರುವ  ಪಂದ್ಯದಲ್ಲಿ ಕೆರ್ರಿ ಹೋಪ್ ಅವರೊಂದಿಗೆ ಸೆಣೆಸಲಿದ್ದಾರೆ.

30 ವರ್ಷದ ವಿಜೇಂದರ್ ಸಿಂಗ್ ವೃತ್ತಪರ ಬಾಕ್ಸಿಂಗ್​ನಲ್ಲಿ ಅತ್ಯುತ್ತಮ ಆರಂಭ ಪಡೆದಿದ್ದು, ಇದುವರೆಗೆ ಆಡಿರುವ ಎಲ್ಲಾ 6 ಪಂದ್ಯಗಳಲ್ಲಿ ವಿಜೇಂದರ್ ನಾಕೌಟ್ ಗೆಲುವು ಸಾಧಿಸಿದ್ದಾರೆ. ಇನ್ನು ಮಾಜಿ ಯೂರೋಪಿಯನ್ ಚಾಂಪಿಯನ್ ಕೆರ್ರಿ ಹೋಪ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದು, ಹೋಪ್ ಇದುವರೆಗೆ 30 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 2 ನಾಕೌಟ್ ಜಯ ಸೇರಿದಂತೆ 23  ಪಂದ್ಯಗಳಲ್ಲಿ ಹೋಪ್ ಜಯಿಸಿದ್ದಾರೆ.

ಡಬ್ಲ್ಯೂಬಿಒ ಏಷ್ಯಾ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ವಿಜೇಂದರ್ ಸಿಂಗ್ ಗೆ ಈ ಪಂದ್ಯ ಪ್ರಮುಖವಾಗಿದ್ದು, ಪ್ರಮುಖ ವಿಚಾರವೆಂದರೆ ಈ ಬಹು ನಿರೀಕ್ಷಿತ ಪಂದ್ಯ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈ  ಪಂದ್ಯ ನಡೆಯುತ್ತಿದೆ. ಹೀಗಾಗಿ ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯದ ಕುರಿತಂತೆ ವಿಜೇಂದರ್ ಸಿಂಗ್ ಮೇಲೆ ಒತ್ತಡ ಹೆಚ್ಚಾಗಿದ್ದು, ತವರಿನಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲ್ಲಲೇ ಬೇಕಾದ  ಒತ್ತಡದಲ್ಲಿ ವಿಜೇಂದರ್ ಸಿಂಗ್ ಇದ್ದಾರೆ.

ವಿಜೇಂದರ್ ಸಿಂಗ್ ಗೆ ಹೋಪ್ ಸವಾಲು
ಇದೇ ವೇಳೆ ಭಾರತದಲ್ಲಿ ಪಂದ್ಯ ನಡೆಯುತ್ತಿರುವ ಹಿನ್ನಲೆಯಲ್ಲಿ ಮಾತನಾಡಿದ ಎದುರಾಳಿ ಬಾಕ್ಸರ್ ಕೆರ್ರಿ ಹೋಪ್, "ವಿಜೇಂದರ್ ಸಿಂಗ್ ಭಾರತದಲ್ಲಿ ಸೂಪರ್​ಸ್ಟಾರ್ ಇರಬಹುದು. ಆದರೆ  ನನಗೆ ಆತ ಒಬ್ಬ ಬಾಕ್ಸರ್ ಮಾತ್ರ. ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸಿಂಗ್​ಗೆ ಬಂದು 1 ವರ್ಷವಾಗಿದೆ. ನಾನು 12 ವರ್ಷಗಳಿಂದ ವೃತ್ತಿಪರ ಬಾಕ್ಸಿಂಗ್​ನಲ್ಲಿದ್ದೇನೆ. ಜತೆಗೆ ನಾನು 3ನೇ  ಶ್ರೇಯಾಂಕ ಕೂಡ ಪಡೆದಿದ್ದೆ. ಭಾರತದ ಬಾಕ್ಸಿಂಗ್ ಅಭಿಮಾನಿಗಳು ವಿಜೇಂದರ್​ಗೆ ಬೆಂಬಲ ನೀಡಬಹುದು. ಆದರೆ ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ವಿಜೇಂದರ್ ಸಿಂಗ್ ಸಾಕಷ್ಟು  ಒತ್ತಡದಲ್ಲಿದ್ದಾರೆ. ನನ್ನನ್ನು ಸೋಲಿಸಲು ಅವರು ಕಠಿಣ ಪರಿಶ್ರಮ ಪಡಬೇಕು ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಜುಲೈ 16ರ ಪಂದ್ಯವನ್ನು ಕಾದು ನೋಡಿ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ.

ಪ್ರಧಾನಿ ಮೋದಿ, ಸಚಿನ್ ಗೆ ವಿಜೇಂದರ್ ಆಹ್ವಾನ, ಸೆಹ್ವಾಗ್ ಸಿಕ್ತು ಟಿಕೆಟ್
ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್  ಸೇರಿದಂತೆ ಹಲವು ಗಣ್ಯರನ್ನು ಪಂದ್ಯ ವೀಕ್ಷಿಸಲು ಆಮಂತ್ರಣ ನೀಡಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರಿಗೆ ಪಂದ್ಯ ವೀಕ್ಷಣೆಯ ಮೊದಲ ಟಿಕೆಟ್ ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.