ಅತ್ಯಾಚಾರ ಹೇಳಿಕೆ: ರಿಯೋ ಒಲಿಂಪಿಕ್ಸ್ ರಾಯಭಾರಿ ಆಯ್ಕೆಯಿಂದ ಸಲ್ಮಾನ್ ಔಟ್?

ಅತ್ಯಾಚಾರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಮುಂಬರುವ ರಿಯೋ ಒಲಿಂಪಿಕ್ಸ್ ನ ಸದ್ಭಾವನಾ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್

ನವದೆಹಲಿ: ಅತ್ಯಾಚಾರ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ರನ್ನು ಮುಂಬರುವ ರಿಯೋ ಒಲಿಂಪಿಕ್ಸ್ ನ ಸದ್ಭಾವನಾ ರಾಯಭಾರಿಯಾಗಿ ಕೈಬಿಡಲು ಭಾರತೀಯ ಒಲಿಂಪಿಕ್ಸ್ ಸಂಘ ಚಿಂತಿಸಿದೆ.

ವಿವಾದಾತ್ಮಕ ಹೇಳಿಕೆ ಕುರಿತಂತೆ ಸಲ್ಮಾನ್ ಖಾನ್ ಬಹಿರಂಗ ಕ್ಷಮೆಯಾಚಿಸುವ ಹೇಳಿಕೆಯನ್ನು ನೀಡದಿದ್ದರೆ ಸಲ್ಮಾನ್ ರನ್ನು ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಕ್ರೀಡಾ ತಂಡದ ಸದ್ಭಾವನಾ ರಾಯಭಾರಿಯಾಗಿ ಕೈಬಿಡಲಾಗುವುದೆಂಬ ಬೆದರಿಕೆಯನ್ನು ಐಒಎ ಹಾಕಿರುವುದಾಗಿ ಡಿಎನ್ ಎ ವರದಿ ಮಾಡಿದೆ.

ಸದ್ಭಾವನಾ ರಾಯಭಾರಿಯಾಗಿ ಸಲ್ಮಾನ್ ನೀಡಿರುವ ಹೇಳಿಕೆಯು ದೇಶದ ಎಲ್ಲ ಕ್ರೀಡಾಳುಗಳಿಗೆ ತಪ್ಪು ಸಂದೇಶವನ್ನು ನೀಡುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಸಂಘದ ಜಂಟಿ ಕಾರ್ಯದರ್ಶಿ ಮತ್ತು ರಿಯೋ ಒಲಿಂಪಿಕ್ಸ್ ಗೇಮ್ಸ್ ನ ಚೀಪ್ ಡಿ ಮಿಶನ್ ಆಗಿರುವ ರಾಕೇಶ್ ಗುಪ್ತಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com