ಕೋಪಾ ಫೈನಲ್ಸ್ ನಲ್ಲಿ ಸೋಲು: ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ಮೆಸ್ಸಿ ಗುಡ್ ಬೈ

ಅರ್ಜೆಂಟೀನಾದ ಭರವಸೆ ಆಟಗಾರ ಮತ್ತು ತಂಡದ ನಾಯಕ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಹೊಂದುವುದಾಗಿ ...
ಲಿಯೋನಲ್ ಮೆಸ್ಸಿ
ಲಿಯೋನಲ್ ಮೆಸ್ಸಿ
Updated on

ಈಸ್ಟ್ ರುದರ್​ಫೋರ್ಡ್: ಅರ್ಜೆಂಟೀನಾದ ಭರವಸೆ ಆಟಗಾರ ಮತ್ತು ತಂಡದ ನಾಯಕ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್​ಬಾಲ್​ನಿಂದ ನಿವೃತ್ತಿ ಹೊಂದುವುದಾಗಿ ಘೊಷಿಸಿದ್ದಾರೆ.

ಕೋಪಾ ಅಮೆರಿಕಾ ಫೈನಲ್ಸ್​ನಲ್ಲಿ ಚಿಲಿ ವಿರುದ್ಧ ಸೋಲು ಅನುಭವಿಸಿದ್ದೇ ಮೆಸ್ಸಿಯ ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.

"ತಂಡಕ್ಕಾಗಿ ನನ್ನಿಂದ ಏನೆಲ್ಲಾ ಮಾಡಬಹುದೋ, ಅದನ್ನೆಲ್ಲಾ ಮಾಡಿದ್ದೇನೆ, ನಾಲ್ಕು ಪಂದ್ಯಗಳನ್ನು ಆಡಿದ್ದರೂ ನನಗೆ ಚ್ಯಾಂಪಿಯನ್ ಪಟ್ಟ ಗಳಿಸಿಕೊಳ್ಳಲಾಗಲಿಲ್ಲ, ಇದು ನನಗೆ ತುಂಬಾ ನೋವುಂಟು ಮಾಡಿದೆ ಎಂದು ಮೆಸ್ಸಿ ನೊಂದು ನುಡಿದಿದ್ದಾರೆ".

ಇದು ಕಷ್ಟದ ಸಮಯವಾಗಿದ್ದು, ಕೋಪಾ ಕಪ್ ಸೋತಿದ್ದಕ್ಕೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಮೆಸ್ಸಿ ಹೇಳಿದ್ದಾರೆ. ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ ಇನ್ನು ನನ್ನ ಅವಶ್ಯಕತೆಯಿಲ್ಲ ಎಂಬುದನ್ನು ಅರಿತು ನಿವೃತ್ತಿ ನಿರ್ಧಾರ ಪ್ರಕಟಿಸಿರುವುದಾಗಿ ಹೇಳಿದರು.

ಪೆನಾಲ್ಟಿ ಶೂಟೌಟ್​ನಲ್ಲಿ ಚಿಲಿ ವಿರುದ್ಧ ಗೋಲು ಗಳಿಸಲು ಸಾಧ್ಯವಾಗದೆ ಸತತ ಎರಡನೇ ಬಾರಿ ಫೈನಲ್ಸ್​ನಲ್ಲಿ ಸೋಲು ಕಂಡಿರುವುದು ಮೆಸ್ಸಿ ನಿವೃತ್ತಿ ನಿರ್ಧಾರಕ್ಕೆ ಪ್ರಮುಖ ಕಾರಣ ಇರಬಹುದೆನ್ನುವುದು ಅವರ ಆಪ್ತರ ಮಾತಾಗಿದೆ.

2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ 2014ರ ಫಿಫಾ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನದ ಮೂಲಕ ವಿಶ್ವದ ಪುಟ್​ಬಾಲ್ ಪ್ರಿಯರ ಮನೆ ಮಾತಾಗಿದ್ದ 29 ವರ್ಷದ ಲಿಯೋನೆಲ್ ಮೆಸ್ಸಿ 2005ರಲ್ಲಿ ನೆದರ್​ಲ್ಯಾಂಡ್​ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಚಾಂಪಿಯನ್ ಆಗಿಸಲು ಮಹತ್ವದ ಪಾತ್ರ ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com