

ನವದೆಹಲಿ: ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಈ ಮಧ್ಯೆ ಟೀಂ ಇಂಡಿಯಾದ ಸಮವಸ್ತ್ರ ಪ್ರಾಯೋಜಕವಾದ ನೈಕಿ ಸಂಸ್ಥೆ ಹೊಸ ವಿನ್ಯಾಸ ಜೆರ್ಸಿಯನ್ನು ಅನಾವರಣ ಮಾಡಿದೆ.
ಟೀಂ ಇಂಡಿಯಾ ಪುರುಷ ಹಾಗೂ ಮಹಿಳಾ ತಂಡಗಳ ಜೆರ್ಸಿ ಬಿಡುಗಡೆಯಾಗಿದ್ದು, ಜರ್ಸಿ ತೊಟ್ಟು ಆರ್. ಅಶ್ವಿನ್, ಅಂಜಿಕ್ಯ ರಹಾನೆ, ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ, ಮಹಿಳಾ ತಂಡದ ಹರ್ಮನ್ ಪ್ರೀತ್ ಕೌರ್, ಮಿಥಾಲಿ ರಾಜ್, ಶುಭಲಕ್ಷ್ಮಿ ಶರ್ಮ ಪೋಸ್ ನೀಡಿದ್ದಾರೆ. ಹೊಸ ಜೆರ್ಸಿಯಲ್ಲಿ ಪ್ರಮುಖವಾಗಿ ಸ್ಟ್ಯಾಂಡ್
ಅಪ್ ಕಲರ್ ಬಳಸಲಾಗಿದೆ. ಜೆರ್ಸಿ ಸಂಪೂರ್ಣ ಏಷ್ಯನ್ ಮಾದರಿಯಲ್ಲಿದ್ದು, ಪ್ಯಾಟ್ ಅನ್ನು ವಿಭಿನ್ನವಾಗಿ ಹೊಲಿಯಲಾಗಿದೆ. ಮಾರ್ಚ್ 15ರಂದು ಆರಂಭವಾಗಲಿರುವ ವಿಶ್ವಕಪ್ ನಲ್ಲಿ ಹೊಸ ಜೆರ್ಸಿಯೊಂದಿಗೆ ಟೀಂ ಇಂಡಿಯಾ ಕಣಕ್ಕೀಳಿಯಲಿದೆ.