ರಿಯೋ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ನರಸಿಂಗ್ ಯಾದವ್ ಗೆ ಹಲ್ಲೆ ಭೀತಿ!

ಮುಂಬರುವ ರಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಖ್ಯಾತ ರೆಸ್ಲರ್ ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ಅವರ ನಡುವಿನ ಶೀತಲ ಸಮರ ತಾರಕಕತ್ಕೇರಿದ್ದು..
ರೆಸ್ಲರ್ ನರಸಿಂಗ್ ಪಂಚಮ್ ಯಾದವ್ ಮತ್ತು ಸುಶೀಲ್ ಕುಮಾರ್ (ಸಂಗ್ರಹ ಚಿತ್ರ)
ರೆಸ್ಲರ್ ನರಸಿಂಗ್ ಪಂಚಮ್ ಯಾದವ್ ಮತ್ತು ಸುಶೀಲ್ ಕುಮಾರ್ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಮುಂಬರುವ ರಿಯೊ ಒಲಿಂಪಿಕ್ಸ್ ಗೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಖ್ಯಾತ ರೆಸ್ಲರ್ ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್ ಅವರ ನಡುವಿನ ಶೀತಲ ಸಮರ  ತಾರಕಕತ್ಕೇರಿದ್ದು, ಇದೀಗ ರೆಸ್ಲರ್ ನರಸಿಂಗ್ ಯಾದವ್ ಅವರ ವಿರುದ್ಧ ಹಲ್ಲೆ ನಡೆಯುವ ಸಾಧ್ಯತೆ ಕುರಿತು ಸಿಐಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ರಿಯೋ ಒಲಿ೦ಪಿಕ್ಸ್ ಅಹ೯ತೆ ವಿಚಾರವಾಗಿ ಭಾರತೀಯ ರೆಸ್ಲರ್ ಗಳಾದ ನರಸಿ೦ಗ್ ಪ೦ಚಮ್ ಯಾದವ್ ಹಾಗೂ ಸುಶೀಲ್ ಕುಮಾರ್ ನಡುವಿನ ಶೀತಲ ಸಮರ ಗ೦ಭೀರ ಹ೦ತ ತಲುಪಿದ್ದು,  ಹರ್ಯಾಣ ಪೊಲೀಸ್‍ನ ಅಪರಾಧ ತನಿಖಾ ವಿಭಾಗ (ಸಿಐಡಿ), ರೆಸ್ಲರ್ ನರಸಿ೦ಗ್ ಯಾದವ್ ಮೇಲೆ ಸಾಯ್‍ನ ಸೋನೆಪತ್‍ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದ ವೇಳೆ ಹಲ್ಲೆ ನಡೆಯುವ  ಕುರಿತು ಎಚ್ಚರಿಕೆ ರವಾನಿಸಿದೆ.

ಈ ಕುರಿತು ಹರ್ಯಾಣದ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ತರಬೇತಿ ಶಿಬಿರಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ಇನ್ನು ಸಿಐಡಿ ಅಧಿಕಾರಿಗಳು 2 ದಿನಗಳ ಹಿ೦ದೆಯಷ್ಟೇ 2ನೇ  ಬಾರಿಗೆ ಸೋನೆಪತ್‍ನ ಸಾಯ್ ಶಿಬಿರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಾರಾಷ್ಟ್ರ ಪೊಲೀಸ್‍ನಲ್ಲಿ ಉಪ ವರಿಷ್ಠಾಧಿಕಾರಿಯಾಗಿರುವ ನರಸಿ೦ಗ್ ಯಾದವ್ ತರಬೇತಿ ನಡೆಸುವ  ಸ್ಥಳದಲ್ಲಿ ಸಾಯ್ ಅಧಿಕಾರಿಗಳ ಜತೆಗೂ ಪೊಲೀಸರು ಭದ್ರತಾ ಪರಿಸ್ಥಿತಿಯ ಪರಾಮಶೆ೯ ನಡೆಸಿದ್ದಾರೆ.

ಮೂಲಗಳ ಪ್ರಕಾರ ಹೊರಗಿನ ಕೆಲವರಿ೦ದ ರೆಸ್ಲರ್ ನರಸಿ೦ಗ್ ಯಾದವ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ವ್ಯಕ್ತವಾಗಿದ್ದು, ಗುರುವಾರದಿ೦ದಲೇ ಸಾಯ್ ಆವರಣದಲ್ಲಿ ಪೊಲೀಸ್ ನಿಯೋಜನೆ  ಮಾಡಲಾಗಿದೆ. ಬುಧವಾರ ಶಿಬಿರ ಆರ೦ಭವಾಗಿದ್ದರೂ, ಗುರುವಾರದವರೆಗೂ ನರಸಿ೦ಗ್ ಶಿಬಿರಕ್ಕೆ ಹಾಜರಾಗಿರಲಿಲ್ಲ. 2016ರ ರಿಯೋ ಒಲಿ೦ಪಿಕ್ಸ್‍ಗೆ ಅಹ೯ತೆ ಪಡೆದ ರೆಸ್ಲರ್‍ಗಳು ಸಾಯ್  ಬಾಲಗ್ರಹ ಕೇ೦ದ್ರದಲ್ಲಿ ತರಬೇತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ರೆಸ್ಲರ್ ನರಸಿಂಗ್ ಯಾದವ್ ಅವರು, ಯಾರಾದರೂ ನನ್ನ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ಮಾಡಲು ಹೇಗೆ ಸಾಧ್ಯ. ನಾನು ಮತ್ತು ಸುಶೀಲ್ ಸಹೋದರರಂತೆ  ಇದ್ದೇವೆ. ಸಿಐಡಿ ನೀಡಿರುವ ವರದಿಯ ಬಗ್ಗೆ ನನಗೆ ಅರಿವಿದೆ. ಆದರೆ, ಉದ್ದೇಶಪೂವ೯ಕವಾಗಿ ಯಾರೋ ಒಬ್ಬರು ನನ್ನ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ  ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com