ಸಾನಿಯಾ-ಮಂಜ್ರೇಕರ್ ನಡುವೆ ಟ್ವೀಟ್ ಸಮರ

ಮಹಿಳಾ ಡಬಲ್ಸ್ ನಲ್ಲಿ ಸತತ 80 ವಾರಗಳಿಂದ ವಿಶ್ವ ನಂ.1 ಸ್ಥಾನದಲ್ಲಿದ್ದೇನೆ ಎಂದು ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್...
ಸಾನಿಯಾ ಮಿರ್ಜಾ, ಸಂಜಯ್ ಮಂಜ್ರೇಕರ್
ಸಾನಿಯಾ ಮಿರ್ಜಾ, ಸಂಜಯ್ ಮಂಜ್ರೇಕರ್
Updated on: 

ಹೈದರಾಬಾದ್: ಮಹಿಳಾ ಡಬಲ್ಸ್ ನಲ್ಲಿ ಸತತ 80 ವಾರಗಳಿಂದ ವಿಶ್ವ ನಂ.1 ಸ್ಥಾನದಲ್ಲಿದ್ದೇನೆ ಎಂದು ಭಾರತದ ಸ್ಟಾರ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್ ಮಾಡಿದ್ದು ಇದಕ್ಕೆ ಡಬಲ್ಸ್ ನಲ್ಲಿ ನಂ.1 ಅನ್ನುತ್ತಿರುವುದಾ?...ಕಂಗ್ರಾಟ್ಸ್! ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಸಾನಿಯಾ ಕಾಲೆಳೆದಿದ್ದರು.

ಬಳಿಕ ಸಾನಿಯಾ ಮತ್ತು ಮಾಂಜ್ರೇಕರ್ ನಡುವೆ ಟ್ವೀಟ್ ಸಮರ ನಡೆದಿತ್ತು. ಒಬ್ಬರಿಗೊಬ್ಬರು ಕಾಲೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಸಾನಿಯಾ ಮಿರ್ಜಾ: ಮಹಿಳಾ ಡಬಲ್ಸ್ ನಲ್ಲಿ ವಿಶ್ವ ನಂ.1 ಸ್ಥಾನ ತಲುಪಿ ಸತತ 80 ವಾರಗಳನ್ನು ಇದೀಗ ಪೂರೈಸಿದ್ದೇನೆ. ಇದೊಂದು ಅಮೋಘ ಯಾನ, ಮತ್ತಷ್ಟು ಕಠಿಣ ಸಾಧನೆಗೆ ಪ್ರೇರಣೆ ನೀಡಿದೆ.

ಸಂಜಯ್ ಮಂಜ್ರೇಕರ್: ಡಬಲ್ಸ್ ನಲ್ಲಿ ನಂ.1 ಅನ್ನುತ್ತಿರುವುದಾ?...ಕಂಗ್ರಾಟ್ಸ್!

ಸಾನಿಯಾ ಮಿರ್ಜಾ: ನಾನು ಸಿಂಗಲ್ಸ್ ನಲ್ಲಿ ಆಡುವುದಿಲ್ಲ. ಇದು ಸಾಮಾನ್ಯ ಜ್ಞಾನ ತಾನೇ? ಈಗೀಗ ಸಾಮಾನ್ಯಜ್ಞಾನವನ್ನೂ ಸಾಮಾನ್ಯವೆನ್ನುವ ಪರಿಸ್ಥಿತಿಯಿಲ್ಲ ಅಂತನ್ನಿಸುತ್ತಾ ಇದೆ.

ಸಂಜಯ್ ಮಂಜ್ರೇಕರ್: ಹೌದಪ್ಪಾ, ಸಾಮಾನ್ಯ ಜ್ಞಾನವಿಲ್ಲದ ನನ್ನಂತಹವನಿಗೆ ಭಾರೀ ಮಾಹಿತಿಯನ್ನೇ ನೀವು ನೀಡಿರಲಿಲ್ಲ!

29 ವರ್ಷದ ಸಾನಿಯಾ ಮಿರ್ಜಾ ಡಬಲ್ಸ್ ವಿಭಾಗದಲ್ಲಿ ಸತತ 80 ವಾರಗಳ ಕಾಲ ನಂ-1 ಸ್ಥಾನ ಕಾಪಾಡಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com