ಅಂತಾರಾಷ್ಟ್ರೀಯ ಫುಟ್ ಬಾಲ್ ಆಟಗಾರ ಹೆನ್ರಿಕೆಝ್ ಶೂಟೌಟ್ ಗೆ ಬಲಿ!

ಪನಾಮದ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರ ಅಮಿಲ್ಕಾರ್‌ ಹೆನ್ರಿಕೆಝ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ.
ಪನಾಮ ಫುಟ್ ಬಾಲ್ ಆಟಗಾರ ಅಮಿಲ್ಕಾರ್‌ ಹೆನ್ರಿಕೆಝ್‌
ಪನಾಮ ಫುಟ್ ಬಾಲ್ ಆಟಗಾರ ಅಮಿಲ್ಕಾರ್‌ ಹೆನ್ರಿಕೆಝ್‌
Updated on

ಪನಾಮ: ಪನಾಮದ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರ ಅಮಿಲ್ಕಾರ್‌ ಹೆನ್ರಿಕೆಝ್‌ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ.

33 ವರ್ಷದ ಆಟಗಾರ ಅಮಿಲ್ಕಾರ್‌ ಹೆನ್ರಿಕೆಝ್‌ ಕೊಲನ್‌ ನಗರದ ತಮ್ಮ ನಿವಾಸದಿಂದ ಹೊರಬರುತ್ತಿರುವಾಗ ಕೆಂಪು ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು  ತಿಳಿಸಿ​ದ್ದಾರೆ. ಈ ವೇಳೆ ಹೆನ್ರಿಕೆಝ್ ಅವರ ದೇಹಕ್ಕೆ ಹಲವು ಗುಂಡುಗಳ ಹೊಕ್ಕಿದ್ದು, ಕೂಡಲೇ ಅವರನ್ನು ಸ್ಥಳೀರ ನೆರವಿನಿಂದ ಆಸ್ಪತ್ರೆಗೆ ದಾಖಲಿ​ಸ​ಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ಕೊನೆ​ ಯುಸಿರೆಳೆದಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಯಲ್ಲಿ ಮತ್ತಿ​ಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರೂ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀ​ಸರು ತಿಳಿಸಿದ್ದಾರೆ. ಪನಾಮ ರಾಷ್ಟ್ರೀಯ ತಂಡದ ಅನುಭವಿ ಮಿಡ್‌ ಫೀಲ್ಡರ್‌ ಆಗಿದ್ದ ಹೆನ್ರಿಕೆಝ್‌ ಪನಾಮ  ಪರ 75 ಪಂದ್ಯಗಳನ್ನು ಆಡಿದ್ದರು. 2018ರ ಫೀಫಾ ವಿಶ್ವಕಪ್‌ ನ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಅವರು ಆಡುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com