ಸರಿತಾ ದೇವಿ ನಂತರ ವೃತ್ತಿಪರ ಬಾಕ್ಸಿಂಗ್ಗೆ ಪಿಂಕಿ ಜಾಂಗ್ರಾ ರೆಡಿ

ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ಪಾಲ್ಗೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ...
ಪಿಂಕಿ ಜಾಂಗ್ರಾ
ಪಿಂಕಿ ಜಾಂಗ್ರಾ
ನವದೆಹಲಿ: ವೃತ್ತಿಪರ ಬಾಕ್ಸಿಂಗ್ ಲೀಗ್ ನಲ್ಲಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಎಲ್. ಸರಿತಾ ದೇವಿ ಪಾಲ್ಗೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಕಾಮನ್ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತೆ ಪಿಂಕಿ ಜಾಂಗ್ರಾ ಕೂಡ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. 
ಸ್ಪೋರ್ಟಿ ಬಾಕ್ಸಿಂಗ್ ಪ್ರೈ.ಲಿ ಜತೆಗೆ ಈಗಾಗಲೇ ಸಹಿ ಹಾಕಿರುವುದಾಗಿ ಪಿಂಕಿ ಜಾಂಗ್ರಾ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಪಿಂಕಿ ಮಹಿಳಾ ಬಾಕ್ಸಿಂಗ್ ನ ರಾಷ್ಟ್ರೀ ಶಿಬಿರದಲ್ಲಿದ್ದಾರೆ. 
ವೃತ್ತಿಪರ ಬಾಕ್ಸಿಂಗ್ ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಹಾಗಂತ ಹವ್ಯಾಸಿ ಬಾಕ್ಸಿಂಗ್ ನಲ್ಲಿ ಭಾಗವಹಿಸುವುದಿಲ್ಲ ಎಂದಲ್ಲ, ಈಗಲೂ ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ನಲ್ಲಿ ಪಾಲ್ಗೊಳ್ಳಲು ಕಾತುರದಿಂದಿದ್ದೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com