ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ಕಾಮುಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಕ್ರೀಡಾಪಟು ಕೃಷ್ಣಾ ಪೂನಿಯಾ

ಕಾಮನ್ವೆಲ್ತ್ ಚಿನ್ನ ವಿಜೇತೆ ಕೃಷ್ಣಾ ಪೂನಿಯಾ ಹುಡುಗಿಯರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ ಕಾಮುಕರನ್ನು ಓಡಿಸಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ನಿಜ...
ಕೃಷ್ಣಾ ಪೂನಿಯಾ
ಕೃಷ್ಣಾ ಪೂನಿಯಾ
Updated on: 

ನವದೆಹಲಿ: ಕಾಮನ್ವೆಲ್ತ್ ಚಿನ್ನ ವಿಜೇತೆ ಕೃಷ್ಣಾ ಪೂನಿಯಾ ಹುಡುಗಿಯರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ ಕಾಮುಕರನ್ನು ಓಡಿಸಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ.

ಹುಡುಗಿಯರನ್ನು ಚುಡಾಯಿಸುವಾಗ ಅದನ್ನು ಎದುರಿಸಲು ಹುಡುಗರೇ ಮುಂದಾಗಲ್ಲ ಅಂತಹ ಪರಿಸ್ಥಿತಿಯಲ್ಲಿ ಕೃಷ್ಣಾ ಪೂನಿಯಾ ಯುವಕರಿಬ್ಬರನ್ನು ಗದುರಿಸಿದ್ದಾರೆ. ಇದರಿಂದ ಗಾಬರಿಗೊಂಡ ಯುವಕರು ಅಲ್ಲಿಂದ ಕಾಲು ಕಿತ್ತಿದ್ದಾರೆ. ಅವರಿಬ್ಬರನ್ನು ಬೆನ್ನತ್ತಿದ ಪೂನಿಯಾ ಓರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ದಿಟ್ಟತನ ಮೆರೆದಿದ್ದಾರೆ.

39 ವರ್ಷದ ಕೃಷ್ಣ ಪೂನಿಯಾ ಜನವರಿ 1ರಂದು ರಾಜಸ್ಥಾನದ ಚುರು ಜಿಲ್ಲೆಯ ರಾಜಗಢದಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರೈಲ್ವೇ ಕ್ರಾಸಿಂಗ್ ಬಳಿ ಕಾಮುಕರು ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದನ್ನು ಗಮನಿದ ಅವರು ತಕ್ಷಣ ಯುವತಿಯರ ನೆರವಿಗೆ ಧಾವಿಸಿದರು.

ಕೃಷ್ಣ ಪೂನಿಯಾ 2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಡಿಸ್ಕಸ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದಿದ್ದು ಎರಡು ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com