ಕುಸ್ತಿ ಲೀಗ್: ದಂಗಲ್ ಖ್ಯಾತಿ ಬಬಿತಾ ಗೈರು, ಗೀತಾ ಪೋಗಟ್ ಸ್ಪರ್ಧೆ ಸಾಧ್ಯತೆ

ಪ್ರೋ ಕುಸ್ತಿ ಲೀಗ್ ನಲ್ಲಿ ದಂಗಲ್ ಚಿತ್ರ ಖ್ಯಾತಿಯ ಕುಸ್ತಿ ಪಟುಗಳಾದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಸಹೋದರಿಯರು ಭಾಗವಹಿಸುವುದು ಅನುಮಾನ...
ಬಬಿತಾ ಪೋಗಟ್
ಬಬಿತಾ ಪೋಗಟ್

ನವದೆಹಲಿ: ಪ್ರೋ ಕುಸ್ತಿ ಲೀಗ್ ನಲ್ಲಿ ದಂಗಲ್ ಚಿತ್ರ ಖ್ಯಾತಿಯ ಕುಸ್ತಿ ಪಟುಗಳಾದ ಗೀತಾ ಪೋಗಟ್ ಹಾಗೂ ಬಬಿತಾ ಪೋಗಟ್ ಸಹೋದರಿಯರು ಭಾಗವಹಿಸುವುದು ಅನುಮಾ ಎನ್ನಲಾಗುತ್ತಿದೆ.

ಲೀಗ್ ನಲ್ಲಿ ಈ ಇಬ್ಬರು ಮಹಿಳಾ ಕುಸ್ತಿಪಟುಗಳು ಸ್ಪರ್ಧಿಸದಿರಲು ನಿಖರ ಕಾರಣ ತಿಳಿದಿದು ಬಂದಿಲ್ಲ. ಬಬಿತಾ ಪೋಗಟ್ ಗಾಯಗೊಂಡಿದು ಹೀಗಾಗಿ ಟೂರ್ನಿಯಲ್ಲಿ ಭಾಗಿಯಾಗುತ್ತಿಲ್ಲ ಆದರೆ ಗೀತಾ ಪೋಗಟ್ ಆಡಲಿದ್ದಾರೆ ಎನ್ನಲಾಗಿದೆ.

ಸದ್ಯ ಆಮೀರ್ ಅಭಿನಯದ ದಂಗಲ್ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದ್ದು ಇದರ ಲಾಭ ಪಡೆಯಲು ಉತ್ತರ ಪ್ರದೇಶದ ಫ್ರಾಂಚೈಸಿಯೊಂದು ಸಹೋದರಿಯರನ್ನು ಖರೀದಿಸಿತ್ತು. ಅಲ್ಲದೆ ತಂಡಕ್ಕೆ ಯುಪಿ ದಂಗಲ್ ಎಂದು ಹೆಸರಿಟ್ಟಿತ್ತು. ಇದೀಗ ಗೀತಾ ಹಾಗೂ ಬಬಿತಾ ಬದಲು ಬೇರೆಯವರನ್ನು ಆಯ್ಕೆ ಮಾಡಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com