ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ನಿಂದ ಪೇಸ್ ಹೊರಕ್ಕೆ

ಭಾರತದ ಟೆನಿಸ್ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಅವರ ಬ್ರೆಜಿಲಿಯನ್ ಜೋಡಿ ಆಂಡ್ರೇ ಸಾ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ನಿಂದ ಹೊರಬಿದ್ದಿದ್ದಾರೆ. ಬೆಲಾರಸ್ ನ
ಲಿಯಾಂಡರ್ ಪೇಸ್
ಲಿಯಾಂಡರ್ ಪೇಸ್
Updated on: 
ಮೆಲ್ಬರ್ನ್: ಭಾರತದ ಟೆನಿಸ್ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಮತ್ತು ಅವರ ಬ್ರೆಜಿಲಿಯನ್ ಜೋಡಿ ಆಂಡ್ರೇ ಸಾ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ನಿಂದ ಹೊರಬಿದ್ದಿದ್ದಾರೆ. ಬೆಲಾರಸ್ ನ ಮ್ಯಾಕ್ಸ್ ಮಿರ್ನ್ಶಿ ಮತ್ತು ಫಿಲಿಪ್ಪಿನ್ಸ್ ನ ಟ್ರೀಟ್ ಹುಯೇ ಅವರ ಎದುರು ೬-೪, ೬-೭(೩), ೪-೬ ರಲ್ಲಿ ಮೊದಲ ಸುತ್ತಿನಲ್ಲೇ ಗುರುವಾರ ಸೋಲು ಅನುಭವಿಸಿದ್ದಾರೆ. 
ಎರಡು ಘಂಟೆ ೧೩ ನಿಮಿಷಗಳ ಕಾಲ ನಡೆದ ಈ ಪಂದ್ಯದಲ್ಲಿ ೧೦ ನೇ ಶ್ರೇಯಾಂಕದ ಡಬಲ್ಸ್ ಜೋಡಿಗೆ ಇಂಡೋ-ಬ್ರೆಜಿಲಿಯನ್ ಜೋಡಿ ಸೋಲುಂಡಿದೆ. 
ಆಸ್ಟ್ರೇಲಿಯನ್ ಓಪನ್ ನಲ್ಲಿ ಪೇಸ್ ಮಿಶ್ರ ಡಬಲ್ಸ್ ನಲ್ಲಿ ಮಾರ್ಟಿನಾ ಹಿಂಗಿಸ್ ಜೊತೆಗೆ ಶುಕ್ರವಾರ ಸೆಣಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com