ವಿಂಬಲ್ಡನ್ ಟೂರ್ನಿ ಆರಂಭಕ್ಕೂ ಮುನ್ನ ಶರಪೋವಾ ಔಟ್: ಅಭಿಮಾನಿಗಳಿಗೆ ನಿರಾಸೆ

ಖ್ಯಾತ ಟೆನ್ನಿಸ್ ತಾರೆ ಮರಿಯಾ ಶರಪೋವಾ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ತೊಡೆಯ ಗಾಯದಿಂದ ಚೇತರಿಸಿಕೊಳ್ಳದ ಶರಪೋವಾ ವಿಂಬಲ್ಡನ್ ..
ಮರಿಯಾ ಶರಪೋವಾ
ಮರಿಯಾ ಶರಪೋವಾ
ಲಂಡನ್: ಖ್ಯಾತ ಟೆನ್ನಿಸ್ ತಾರೆ ಮರಿಯಾ ಶರಪೋವಾ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದಾರೆ. ತೊಡೆಯ ಗಾಯದಿಂದ ಚೇತರಿಸಿಕೊಳ್ಳದ ಶರಪೋವಾ ವಿಂಬಲ್ಡನ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.
2004 ರಲ್ಲಿ ಆಲ್ ಇಂಗ್ಲೆಂಡ್ ಕ್ಲಬ್ ನಲ್ಲಿ ಚಾಂಪಿಯನ್ ಆಗಿದ್ದ 30 ವರ್ಷದ ರಷ್ಯಾ ಆಟಗಾರ್ತಿ ಈ ಬಾರಿ ಪ್ರಧಾನ ಸುತ್ತಿನಲ್ಲಿ ಆಡುವ ಮುನ್ನ ಅರ್ಹತಾ ಸುತ್ತಿನಲ್ಲಿ ಆಡಬೇಕಿತ್ತು. 
ತೊಡೆ ಗಾಯ ಸಂಪೂರ್ಣವಾಗಿ ಗುಣಮುಖ ವಾಗದಿರುವುದು ಸ್ಕ್ಯಾನ್ ನಿಂದಾಗಿ ತಿಳಿದಿದೆ. ಈ ಹಿನ್ನೆಲೆಯಲ್ಲಿ ಟೂರ್ನಿಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಶರಪೋವಾ ಹೇಳಿಕೆ ನೀಡಿದ್ದಾರೆ.
ಜುಲೈ 31 ರಿಂದ ಸ್ಟ್ಯಾಂಡ್ ಪೋರ್ಡ್ ನಲ್ಲಿ ಆರಂಭವಾಗುವ ಟೂರ್ನಮೆಂಟ್ ನಲ್ಲಿ ಭಾಗವಹಿಸುವುದಾಗಿ ಅವರು ಹೇಳಿದ್ದಾರೆ. ಡೋಪಿಂಗ್  ನಿಷೇಧದ ಅವಧಿ ಮುಗಿದ ಬಳಿಕ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭವಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com