ಎರಡು ಮಕ್ಕಳ ತಾಯಿ, ಬಾಲ್ಯದ ಗೆಳತಿ ಜೊತೆ ಲಿಯೊನೆಲ್ ಮೆಸ್ಸಿ ವಿವಾಹಕ್ಕೆ ಭರದ ಸಿದ್ಧತೆ

ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಬಾಲ್ಯದ ಗೆಳತಿ ಆಂಟೋನೆಲಾ ಅವರನ್ನು ವಿವಾಹವಾಗಲಿದ್ದಾರೆ...
ಲಿಯೊನೆಲ್ ಮೆಸ್ಸಿ, ಆ್ಯಂಟೊನೆಲ್ಲೊ
ಲಿಯೊನೆಲ್ ಮೆಸ್ಸಿ, ಆ್ಯಂಟೊನೆಲ್ಲೊ
ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಬಾಲ್ಯದ ಗೆಳತಿ ಆಂಟೋನೆಲಾ ಅವರನ್ನು ವಿವಾಹವಾಗಲಿದ್ದಾರೆ. 
ಈ ದಶಕದಲ್ಲಿ ಲ್ಯಾಟಿನ್ ಅಮೆರಿಕ ಸಾಕ್ಷಿಯಾಗುತ್ತಿರುವ ಅತ್ಯಂತ ದುಬಾರಿ ಮದುವೆ ಇದಾಗಲಿದೆ. ಸ್ಪೇನ್ ನ ರಾಣಿ ಸೇರಿದಂತೆ ಖ್ಯಾತ ನಟಿಯರಿಗೆ ವಸ್ತ್ರವಿನ್ಯಾಸ ಮಾಡುವ ರೋಸಾ ಕ್ಲಾರಾ, ಆ್ಯಂಟೊನೆಲ್ಲೊ ಅವರ ಮದುವೆಯ ಉಡುಪನ್ನು ವಿನ್ಯಾಸಗೊಳಿಸಿದ್ದಾರೆ. 
ಮೆಸ್ಸಿಯ ತವರೂರಾದ ರೊಸಾರಿಯೊದಲ್ಲಿ ಈ ವೈಭವದ ವಿವಾಹಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ರೊಸಾರಿಯೊದಲ್ಲಿನ ಸಿಟಿ ಸೆಂಟರ್ ಕ್ಯಾಸಿನೋ ಪಂಚತಾರಾ ಹೋಟೆಲ್ ನಲ್ಲಿ ಮದುವೆ ನಡೆಯುತ್ತಿದ್ದು ಭದ್ರತೆಗಾಗಿ 200ಕ್ಕೂ ಹೆಚ್ಚು ಸೆಕ್ಯೂರಿಟಿ ಏಜೆಂಟ್ ರನ್ನು ನಿಯೋಜಿಸಲಾಗಿದೆ. 
ಆ್ಯಂಡೊನೆಲ್ಲೊ ಲಿಯೊನೆಲ್ ಮೆಸ್ಸಿ 2008ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೊದಲ ಮಗ ಥಿಯಾಗೊಗೀಗ 5 ವರ್ಷ, 2ನೇ ಪುತ್ರ ಮಟಿಯೊಗೆ 2 ವರ್ಷ ವಯಸ್ಸು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com