ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ದಿವ್ಯಾ ಕಕ್ರನ್ ಫೈನಲ್ಸ್ ಗೆ

ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಫೈನಲ್ ಪ್ರವೇಶಿಸಿದ್ದಾರೆ...
ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್
ನವದೆಹಲಿ:  ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ರಿಯೋ ಒಲಿಂಪಿಕ್ಸ್ ಕಂಚು ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ದಿವ್ಯಾಕಕ್ರನ್ ಫೈನಲ್ಸ್ ಪ್ರವೇಶಿಸಿದ್ದಾರೆ. 
69 ಕೆಜಿ ವಿಭಾಗದಲ್ಲಿ ಎದುರಾಳಿಯನ್ನು ಮಣಿಸುವ ಮೂಲಕ ದಿವ್ಯಾ ಕಕ್ರನ್ ಫೈನಲ್ ಪ್ರವೇಶಿಸಿದ ಮೂರನೇ ಭಾರತೀಯ ಮಹಿಳಾ ಕ್ರೀಡಾಪಟುವಾಗಿದ್ದಾರೆ. ಸಾಕ್ಷಿ ಮಲಿಕ್, ವಿನೇಶ್ ಹಾಗೂ ದಿವ್ಯ ಫೈನಲ್ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಸಿಗುವುದು ಖಾತ್ರಿಯಾಗಿದೆ. 
60 ಕೆಜಿ ವಿಭಾಗದಲ್ಲಿ ಹರಿಯಾಣ ಮೂಲದ 24 ವರ್ಷದ ಸಾಕ್ಷಿ ಮಲಿಕ್ ಕಜಕಿಸ್ತಾನದ ಅಯುವಿಲಿಮ್ ಕಾಸಿಮೊವ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿರುವ ಸಾಕ್ಷಿ ಮಲಿಕ್ ಫೈನಲ್ ನಲ್ಲಿ, ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತೆ ಜಪಾನ್ ನ ರಿಸಾಕೋ ಕವಾಯ್ ಅವರೊಂದಿಗೆ ಸೆಣೆಸಲಿದ್ದಾರೆ. 
55 ಕೆಜಿ ವಿಭಾಗದಲ್ಲಿ ವಿನೇಷ್ ಫೋಗಟ್ ಉಜ್ಬೇಕಿಸ್ತಾನದ ಸೆವರಾ ಎಶ್ಮುರಾಟೋವಾ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರೆ. ದಿವ್ಯಾ ತಮ್ಮ ಎದುರಾಳಿ ತೈಪೆಯ ಚೆನ್-ಚಿ ಹುವಾಂಗ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com