ಐಪಿಎಲ್ ಬೆಟ್ಟಿಂಗ್: ಸಿಲಿಕಾನ್ ಸಿಟಿಯಲ್ಲಿ ಸಾವಿರ ಕೂಟಿಗೂ ಅಧಿಕ ವಹಿವಾಟು!

ಐಪಿಎಲ್ ಸೀಸನ್ ಮುಕ್ತಾಯವಾಗಿದ್ದರೂ ಅದರ ಪರಿಣಾಮಗಳು ಮಾತ್ರ ಇನ್ನೂ ಅಂತ್ಯಕಂಡಿಲ್ಲ. ಭಾರತದಲ್ಲಿ ಬೆಟ್ಟಿಂಗ್ ನಿಷೇಧವಾಗಿದ್ದರೂ ಅನಧಿಕೃತವಾಗಿ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚಿಗೆ ಮುಕ್ತಾಯವಾದ ಐಪಿಎಲ್ ಸೀಸನ್ 10 ಸರಣಿಯೇ ಸಾಕ್ಷಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಐಪಿಎಲ್ ಸೀಸನ್ ಮುಕ್ತಾಯವಾಗಿದ್ದರೂ ಅದರ ಪರಿಣಾಮಗಳು ಮಾತ್ರ ಇನ್ನೂ ಅಂತ್ಯಕಂಡಿಲ್ಲ. ಭಾರತದಲ್ಲಿ ಬೆಟ್ಟಿಂಗ್ ನಿಷೇಧವಾಗಿದ್ದರೂ ಅನಧಿಕೃತವಾಗಿ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬುದಕ್ಕೆ  ಇತ್ತೀಚಿಗೆ ಮುಕ್ತಾಯವಾದ ಐಪಿಎಲ್ ಸೀಸನ್ 10 ಸರಣಿಯೇ ಸಾಕ್ಷಿ...

ಹೌದು...ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಸಂದರ್ಭದಲ್ಲಿ ಬೆಂಗಳೂರು ನಗರವೊಂದರಲ್ಲಿಯೇ ಬರೊಬ್ಬರಿ ಸುಮಾರು 10 ಸಾವಿರ ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.  ಮತ್ತೊಂದು ಅಚ್ಚರಿಯ ಸುದ್ದಿ ಎಂದರೆ ಈ ಹಿಂದೆ ಬುಕ್ಕಿಗಳು ಬೆಟ್ಟಿಂಗ್ ವಹಿವಾಟಿಗಾಗಿ ಮೊಬೈಲ್ ಗಳನ್ನು ಬಳಕೆ ಮಾಡುತ್ತಿದ್ದರು. ಅವುಗಳ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದರು. ಆದರೆ ಇದೀಗ ರಂಗೋಲಿ  ಕೆಳಗೆ ನುಗ್ಗುತ್ತಿರುವ ಬುಕ್ಕಿಗಳು ಸಂವಹನಕ್ಕಾಗಿ ವಿನೂತನ ಪ್ರಯೋಗಗಳನ್ನು ನಡೆಸುತ್ತಿದ್ದು, ಮೊಬೈಲ್ ಆ್ಯಪ್ ಗಳು ಮತ್ತು ವೆಬ್ ಸೈಟ್ ಗಳನ್ನು ಬುಕ್ಕಿಂಗ್ ದಂಧೆಗಾಗಿ ಬಳಕೆ ಮಾಡುತ್ತಿದ್ದಾರೆ.

ಹೀಗೆ ಬುಕ್ಕಿಂಗ್ ದಂಧೆಗಾಗಿ ಬಳಕೆ ಮಾಡಲಾದ ಸುಮಾರು 35 ಆ್ಯಪ್ ಗಳನ್ನು ಮತ್ತು ವೆಬ್ ಸೈಟ್ ಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, ಇವುಗಳನ್ನು ಪರಿಶೀಲಿಸಿದಾಗ ಬೃಹತ್ ಪ್ರಮಾಣದ ಬೆಟ್ಟಿಂಗ್ ದಂಧೆ ನಡೆದಿರುವ ಕುರಿತು  ಮಾಹಿತಿ ಲಭ್ಯವಾಗಿದೆ. ಇದಲ್ಲದೆ ವಾಟ್ಸಪ್ ನ ನೂತನ ಎನ್ಕ್ರಿಪ್ಟ್ ಸಂದೇಶ ರವಾನೆ ವ್ಯವಸ್ಥೆ ಮೂಲಕ ಕಾರ್ಯಾಚರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಭಾರತದಲ್ಲಿ ಬೆಟ್ಟಿಂಗ್ ಗೆ ನಿಷೇಧವಿರುವುದರಿಂದ ಬುಕ್ಕಿಗಳು ಮತ್ತು ಬೆಟ್ಟಿಂಗ್ ಕಟ್ಟುವವರು ಯಾವುದೇ ರೀತಿಯ ದಾಖಲಾತಿಗಳು ಇಲ್ಲದೆ ವಹಿವಾಟು ನಡೆಸುತ್ತಾರೆ. ಹೀಗಾಗಿ ಇಬ್ಬರ ನಡುವಿನ ನಂಬಿಕೆಯೇ ಮೂಲ  ಆಧಾರವಾಗಿದ್ದು, ಇದೇ ಕಾರಣಕ್ಕೆ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ. ಕಳೆದ 2 ತಿಂಗಳಲ್ಲಿ ಸಾಕಷ್ಟು ಮಂದಿ ಬೆಟ್ಟಿಂಗ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ದೇಶಾದ್ಯಂತ ನಡೆದ ವಿವಿಧ  ದಾಳಿಗಳಲ್ಲಿ ಪೊಲೀಸರು ಲಕ್ಷಾಂತರ ರುಗಳ ಹಣವನ್ನು ಜಪ್ತಿ ಮಾಡಿದ್ದು, ಸಾಕಷ್ಟು ಮಂದಿ ಬುಕ್ಕಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮೇ 9ರಂದು ರಾಜಾಜಿ ನಗರಗದಲ್ಲಿ ನಡೆದ ದಾಳಿ ವೇಳೆ ಪೊಲೀಸರು ಸುಧಾಕರ್ ಎಂಬ ಆರೋಪಿಯನ್ನು ಬಂಧಿಸಿದ್ದು, 1.76 ಲಕ್ಷ ಹಣವನ್ನು ಜಪ್ತಿ ಮಾಡಿದ್ದರು, ಅಂತೆಯೇ ಮೇ 16ರಂದು ಸಿಸಿಬಿ ಪೊಲೀಸರು  ಮಾಗಡಿ ರಸ್ತೆಯಲ್ಲಿದ್ದ  ಡೆನ್ ಮೇಲೆ ದಾಳಿ ಮಾಡಿ ಅಫ್ರೋಜ್ ಪಾಷಾ ಎಂಬಾತನನ್ನು ವಶಕ್ಕೆ ಪಡೆದು 2.60 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com