ಮೇರಿ ಕೋಮ್
ಮೇರಿ ಕೋಮ್

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್: ಭಾರತದ ಮೇರಿ ಕೋಮ್ ಫೈನಲ್ ಗೆ ಲಗ್ಗೆ

ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ಎಂ. ಸಿ. ಮೇರಿ ಕೋಮ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ.
ಹೋ ಚಿ ಮಿನ್ ಸಿಟಿ:: ಇಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಐದು ಬಾರಿಯ  ವಿಶ್ವ ಚಾಂಪಿಯನ್ ಎಂ. ಸಿ. ಮೇರಿ ಕೋಮ್ ಫೈನಲ್ ಸುತ್ತಿಗೆ ಪ್ರವೇಶಿಸಿದ್ದಾರೆ. ಮೇರಿ ಕಾಮ್ ಜಪಾನ್ ನ ಸುಬಾಸಾ ಕೊಮುರಾ ಅವರನ್ನು 5-0 ಅಂತರದಲ್ಲಿ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಅವರು ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾದರೆ, ಭಾರತೀಯರೊಬ್ಬರು ಇದೇ ಮೊದಲ ಬಾರಿಗೆ ಏಷ್ಯಾ ಕಪ್ ನ  48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಖ್ಯಾತಿಗೆ ಪಾತ್ರರಾಗುತ್ತಾರೆ.
ಒಟ್ಟು ಆರು ಬಾರಿ ಏಷ್ಯಾ ಕಪ್ ನಲ್ಲಿ ಭಾಗವಹಿಸಿದ್ದ ಮೇರಿ ಇದೀಗ ಐದನೇ ಬಾರಿಗೆ ಫೈನಲ್ಸ್ ತಲುಪಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com