ಢಾಕಾ: ಹಾಕಿ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಜಪಾನ್ ವಿರುದ್ಧ 5-1 ಗೋಲ್ ಗಳಿಂದ ಭರ್ಜರಿ ಗೆಲುವು ಪಡೆಯುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಎ ಗುಂಪಿನ ಲೀಗ್ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ ಜಯ ಗಳಿಸಿದೆ. ಭಾರತ ಪರ ಕೊಡಗಿನ ವೀರ ಎಸ್ ವಿ ಸುನೀಲ್, ಲಲಿತ್ ಉಪಾಧ್ಯಾಯ, ರಮಣ್ ದೀಪ್ ಸಿಂಗ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲು ಬಾರಿಸಿದರು.
ಇನ್ನು ಭಾರತ ತನ್ನ 2ನೇ ಪಂದ್ಯವನ್ನು ಆತಿಥೇಯ ಬಾಂಗ್ಲಾದೇಶ ವಿರುದ್ಧ ಅಕ್ಟೋಬರ್ 13ರಂದು ಆಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಬಹುನಿರೀಕ್ಷಿತ ಪಂದ್ಯ ಅಕ್ಟೋಬರ್ 15ರಂದು ನಡೆಯಲಿದೆ.