ಸೆರೆನಾ ವಿಲಿಯಮ್ಸ್‌ ಗೆ ಹೆಣ್ಣು ಮಗು ಜನನ

ಟೆನಿಸ್‌ ಸೂಪರ್‌ ಸ್ಟಾರ್‌ ಸೆರೆನಾ ವಿಲಿಯಮ್ಸ್‌ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸೆರೆನಾ ವಿಲಿಯಮ್ಸ್‌
ಸೆರೆನಾ ವಿಲಿಯಮ್ಸ್‌
Updated on
ಫ್ಲೋರಿಡಾ : ಟೆನಿಸ್‌ ಸೂಪರ್‌ ಸ್ಟಾರ್‌ ಸೆರೆನಾ ವಿಲಿಯಮ್ಸ್‌ ಶುಕ್ರವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.  ಸೆರೆನಾ ವಿಲಿಯಮ್ಸ್‌ ತರಬೇತುದಾರ ಪ್ಯಾಟ್ರಿಕ್‌ ಈ ವಿಷಯವನ್ನು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಸೆರೆನಾ ಮತ್ತು ಅವರ ಅಭಿಮಾನಿಗಳು ಈ ಸುದ್ದಿ ಯಿಂದ ಸಂಭ್ರಮಗೊಂಡಿದ್ದಾರೆ.
36ರ ವಯೋಮಾನದ ಸೆರೆನಾರನ್ನು  ಫ್ಲೋರಿಡಾದ ವೆಸ್ಟ್‌ ಪಾಮ್‌ ಬೀಚ್‌ ನಲ್ಲಿರುವ ಸೈಂಟ್‌ ಮೇರೀಸ್‌ ಮೆಡಿಕಲ್‌ ಸೆಂಟರ್‌ಗೆ ಹೆರಿಗೆಗಾಗಿ ಸೇರಿಸಲಾಗಿತ್ತು.  
ಸೆರೆನಾಳ ಸೋದರಿ ವೀನಸ್‌ ವಿಲಿಯಮ್ಸ್‌ ತನ್ನ ತಂಗಿಗೆ ಹೆಣ್ಣು ಮಗು ಜನಿಸಿರುವುದನ್ನು ಅತ್ಯಂತ ಸಂಭ್ರಮೋಲ್ಲಾಸದಿಂದ ಸ್ವಾಗತಿಸಿದ್ದಾಳೆ. ತಾನು super excited ಆಗಿದ್ದೇನೆ ಎಂದಾಕೆ ಹೇಳಿದ್ದಾಳೆ. 
35 ವರ್ಷದ ಸೆರೆನಾ ವಿಲಿಯಮ್ಸ್‌ ರೆಡ್ಡಿಟ್‌ ಸಹ ಸಂಸ್ಥಾಪಕ ಅಲೆಕ್ಸಿಸ್‌ ಒಹಾನಿಯನ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕಳೆದ ಜನವರಿಯಿಂದ ಸೆರೆನಾ ವಿಲಿಯಮ್ಸ್‌ ಯಾವುದೇ ಟೂರ್ನಿಯಲ್ಲೂ ಭಾಗವಹಿಸಿರಲಿಲ್ಲ. ಈ ವಿಷಯವನ್ನು ಸೆರೆನಾ ಹಾಗೂ ಅಲೆಕ್ಸಿಸ್‌ ಒಹಾನಿಯನ್‌ ಇನ್ನೂ ಖಚಿತಪಡಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com