ಯುಎಸ್ ಓಪನ್: ಫೆದರರ್ ರನ್ನು ಸೋಲಿಸಿ ಸೆಮಿ ಫೈನಲ್ಸ್ ಗೆ ಏರಿದ ಡೆಲ್ ಪೊಟ್ರೊ

ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಬುಧವಾರ ಮತ್ತೊಮ್ಮೆ ಯುಎಸ್ ಓಪನ್ ಸೆಮೀಸ್ ಗೆ ಪ್ರವೇಶ ಮಾಡಿದ್ದಾರೆ.
ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ
ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ
Updated on: 
ನ್ಯೂ ಯಾರ್ಕ್: ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಬುಧವಾರ ಮತ್ತೊಮ್ಮೆ ಯುಎಸ್ ಓಪನ್ ಸೆಮೀಸ್ ಗೆ ಪ್ರವೇಶ ಮಾಡಿದ್ದಾರೆ. 
ಐದು ಬಾರಿಯ ಚಾಂಪಿಯನ್ ಸ್ವಿಸ್ ದಂತಕಥೆ, ರೊಜರ್ ಫೆಡರರ್ ವಿರುದ್ಧದ ಪಂದ್ಯದಲ್ಲಿ ಜಯ ದಾಕಲಿಸಿದ ಜುವಾನ್ ಮಾರ್ಟಿನ್  ಫೆದರರ್ ಮತ್ತು ರಾಫೆಲ್ ನಡಾಲ್ ನಡುವಿನ ರೋಚಕ ಸೆಮಿ ಫೈನಲ್ಸ್ ನೋಡುವ ಕಾತುರದಿಂದಿದ್ದ ಪ್ರೇಕ್ಷಕರಿಗೆ ನಿರಾಸೆಯುಯಂಟು ಮಾಡಿದ್ದಾರೆ.
ಈ ಮಹತ್ವದ ಪಂದ್ಯದಲ್ಲಿ  ಜುವಾನ್ ಮಾರ್ಟಿನ್ 7-5, 3-6, 7-6 (10-8), 6-4 ಸೆಟ್ ಗಳಿಂದ ಫೆದರರ್ ವಿರುದ್ಧ ಜಯ ಸಾಧಿಸಿದರು.
ಅರ್ಜೆಂಟೀನಾದ ದೈತ್ಯ ಆಟಗಾರ, 2009 ರಲ್ಲಿ ಸಹ ಸೆಮಿಫೈನಲ್ ನಲ್ಲಿ ರಾಫೆಲ್ ನಡಾಲ್ ಅವರನ್ನು ಸೋಲಿಸಿ ರ ಫೆದರರ್ ಅವರನ್ನು ಫೈನಲ್ ನಲ್ಲಿ ಎದುರಿಸಿದ್ದರು. ಇದೀಗ ಮತ್ತೆ ಶುಕ್ರವಾರದ ಸೆಮಿ-ಫೈನಲ್ ನಲ್ಲಿ ವಿಶ್ವದ ನಂಬರ್ ಒನ್ ನದಾಲ್ ರನ್ನು ಮತ್ತೊಮ್ಮೆ ಎದುರಿಸಲಿದ್ದಾರೆ. 
ಮೂರನೇ ಶ್ರೇಯಾಂಕಿತ ಫೆಡರರ್ ನಿರ್ಗಮಿಸಿದ ನಂತರ ವಿಶ್ವದ ನಂಬರ್ ಒನ್ ಸ್ಥಾನದಲ್ಲಿರುವ  ನಡಾಲ್, ರಷ್ಯಾದ ಹದಿಹರೆಯದ ಆಂಡ್ರೆ ರುಬ್ಲೇವ್ ಅವರನ್ನು ಕೇವಲ 97 ನಿಮಿಷಗಳಲ್ಲಿ 6-1, 6-2, 6-2 ಸೆಟ್ಗಳಿಂದ ಸೋಲಿಸಿದ್ದರು.
ನಡಾಲ್ ಗೆ ಇದು ಆರನೇ ಯುಎಸ್ ಓಪನ್ ಸೆಮಿಫೈನಲ್ ಆಗಿದ್ದು 24 ನೇ ಶ್ರೇಯಂಕದ ಡೆಲ್ ಪೊಟ್ರೊ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com