ಕೊರಿಯಾ ಸೂಪರ್ ಸಿರೀಸ್: ಭಾರತದ ತಂಡಕ್ಕೆ ಸಿಂಧು ನೇತೃತ್ವ; ಸೈನಾ, ಶ್ರೀಕಾಂತ್ ಅಲಭ್ಯ

ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕೊರಿಯಾ ಸೂಪರ್ ಸಿರೀಸ್ ನಾಳೆಯಿಂದ ಪ್ರಾರಂಭಗೊಳ್ಳಲಿದ್ದು ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕ ವಿಜೇತೆ ಪಿವಿ...
ಪಿವಿ ಸಿಂಧು
ಪಿವಿ ಸಿಂಧು
Updated on
ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕೊರಿಯಾ ಸೂಪರ್ ಸಿರೀಸ್ ನಾಳೆಯಿಂದ ಪ್ರಾರಂಭಗೊಳ್ಳಲಿದ್ದು ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ನೇತೃತ್ವದಲ್ಲಿ ಭಾರತ ತಂಡ ತೆರಳಲಿದೆ. 
ರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಒಂದು ಕಂಚು ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದಾರೆ. ಹೀಗಾಗಿ ಎಲ್ಲರ ಕಣ್ಣು ಸಿಂಧು ಮೇಲಿದೆ. ಇನ್ನು ಮುಂದಿನ ವಾರ ನಡೆಯಲಿರುವ ಜಪಾನ್ ಓಪನ್ ನಲ್ಲಿ ಭಾಗವಹಿಸುವ ಸಲುವಾಗಿ ಸೈನಾ ನೆಹ್ವಾಲ್ ಮತ್ತು ಕಿಡಿಂಬಿ ಶ್ರೀಕಾಂತ್ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 
ಎಸ್ಕೆ ಹ್ಯಾಂಡ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿವಿ ಸಿಂಧು ಹಾಂಕಾಂಗ್ ನ ಚೆಯುಂಗ್ ನೈಗನ್ ಯಿ ವಿರುದ್ಧ ಸೆಣೆಸಲಿದ್ದಾರೆ. ಪುರುಷರ ವಿಭಾಗದಲ್ಲಿ ಎಚ್ಎಸ್ ಪ್ರನೋಯ್ ಹಾಂಕಾಂಗ್ ಆಟಗಾರ ಲಾಂಗ್ ಆಂಗಸ್ ಜತೆ ಸಣೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com