ಕೊರಿಯಾ ಸೂಪರ್ ಸರಣಿ: ಸೆಮಿಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಕೊರಿಯಾ ಮುಕ್ತ ಸೂಪರ್ ಸರಣಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ...
ಪಿವಿ ಸಿಂಧು
ಪಿವಿ ಸಿಂಧು
ಸಿಯೊಲ್: ಕೊರಿಯಾ ಮುಕ್ತ ಸೂಪರ್ ಸರಣಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಒಲಂಪಿಕ್ ಮತ್ತು ವಿಶ್ವ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರು 2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು 21-19 16-21 21-10 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. 
63 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಪಿವಿ ಸಿಂಧುಗೆ ಮಿಟಾನಿ ಅವರು ಕಠಿಣ ಸ್ಪರ್ಧೆ ನೀಡಿದರು. ಉತ್ತಮ ಫಾರ್ಮ್ ನಲ್ಲಿರುವ ಸಿಂಧು ಅಂತಿಮವಾಗಿ ಜಯ ಭೇರಿ ಬಾರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com