ಕೊರಿಯಾ ಸೂಪರ್ ಸೀರೀಸ್: ಸಿಂಧು ಮುಡಿಗೆ ಪ್ರಶಸ್ತಿಯ ಗರಿ

ಭಾರತದ ಅಗ್ರ ಬ್ಯಾಡ್ಮಿಂಟನ್ ಮಹಿಳಾ ಆಟಗಾರ್ತಿ ಪಿ.ವಿ. ಸಿಂಧು, ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಪಿ.ವಿ. ಸಿಂಧು
ಪಿ.ವಿ. ಸಿಂಧು
Updated on
ಸಿಯೋಲ್: ಭಾರತದ ಅಗ್ರ ಬ್ಯಾಡ್ಮಿಂಟನ್ ಮಹಿಳಾ  ಆಟಗಾರ್ತಿ ಪಿ.ವಿ. ಸಿಂಧು, ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಇದು ರಿಯೋ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಶಿಪ್ ಬೆಳ್ಳಿ ಪದಕಧಾರಿ ಸಿಂಧು  ಅವರ ಮೂರನೇ ಸೂಪರ್ ಸಿರೀಸ್ ಪ್ರಶಸ್ತಿಯಾಗಿದೆ. 
ಭಾನುವಾರ ನಡೆದ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ನೊಝೊಮಿ ಓಕುಹಾರ ಅವರನ್ನು 22-20, 11-21, 21-18ರ ಅಂತರದಲ್ಲಿ ಮಣಿಸಿಸಿಂಧೂ ಪ್ರಶಸ್ತಿಗೆ ಮುತ್ತಿಕ್ಕಿದರು.
ಪಂದ್ಯದ ಆರಂಭದಿಂದಲೂ ಇಬ್ಬರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡುಬಂದಿತ್ತು. ಅದರಲ್ಲಿ ಮೊದಲ ಸೆಟ್ 22-10ರ ಅಂತರದಲ್ಲಿ ವಶಪಡಿಸಿಕೊಳ್ಳಲು ಸಿಂಧು  ಯಶಸ್ವಿಯಾದರು. ಆದರೆ ದ್ವಿತೀಯ ಸೆಟ್‌ ನಲ್ಲಿ ತಿರುಗಿಬಿದ್ದ ಓಕುಹಾರ 21-11ರ ಸುಲಭ ಅಂತರದಲ್ಲಿ ಮುನ್ನಡೆ ಸಾಧಿಸುವ ಮೂಲಕ ತಿರುಗಿ ಬಿದ್ದರು. ಇದರಿಂದಾಗಿ ಪಂದ್ಯ ನಿರ್ಣಾಯಕ ಸೆಟ್‌ ಗೆ ಬಂದಿತು.
ಒಂದೊಂದು ಪಾಯಿಂಟ್ ಗಳಿಕೆಗೂ ಇಬ್ಬರ ನಡುವೆ ನಿಕಟ ಪೈಪೋಟಿ ಕಂಡುಬಂದಿತ್ತು. ಕಠಿಣ ಸ್ಪರ್ಧೆಯಲ್ಲಿ ಸಿಂಧು ಅಂತಿಮವಾಗಿ ವಿಜಯದ ಹಾರ ಕೊರಳಿಗೆ ಹಾಕಿಕೊಂಡರು.
ಈ ಮೂಲಕ   ಕೊರಿಯಾ ಓಪನ್ ಸೀರೀಸ್ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯಳೆನ್ನುವ ಹಿರಿಮೆ ಸಿಂಧು ಅವರ ಪಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com