ಢಾಕಾ: ಪಾಕಿಸ್ತಾನ ಕೋಚ್ ಫರ್ಹತ್ ಭಾರತ ಹಾಕಿ ತಂಡ ಕಾಗದದ ಹುಲಿಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮುಂದಿನ ತಿಂಗಳಿನಿಂದ ಬಾಂಗ್ಲಾದೇಶದಲ್ಲಿ ಏಷ್ಯಾ ಕಪ್ ಹಾಕಿ ಕೂಟ ನಡೆಯಲಿದ್ದು ಇದಕ್ಕೂ ಮೊದಲೇ ಪಾಕಿಸ್ತಾನ ಕೋಚ್ ಈ ಹೇಳಿಕೆ ಎರಡು ರಾಷ್ಟ್ರಗಳ ನಡುವಿನ ಕದನಕ್ಕೆ ಕಿಚ್ಚು ಹೊತ್ತಿಸಿದಂತಾಗಿದೆ.
ಏಷ್ಯಾ ತಂಡಗಳ ನಡುವೆ ಪ್ರಬಲ ಹೋರಾಟ ನಡೆಯಲಿದೆ. ಇದರಲ್ಲಿ ವಿಶ್ವದ ಆರನೇ ಸ್ಥಾನದಲ್ಲಿರುವ ಭಾರತ ಬಲಿಷ್ಠ ತಂಡ ಎಂದು ಹೇಳಲಾಗುತ್ತಿದೆ. ಆದರೆ ಇದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಫರ್ಹತ್ ಹೇಳಿದ್ದಾರೆ.