ಕಾಮನ್ವೆಲ್ತ್ 2018: ದೀಪಿಕಾ ಪಳ್ಳಿಕಲ್-ಜೋಶ್ನಾ ಚಿನ್ನಪ್ಪ ಜೋಡಿಯಿಂದ ಬೆಳ್ಳಿ ಪದಕ ಸಾಧನೆ

ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಡಬಲ್ಸ್ ಸ್ಕ್ವಾಷ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ದೀಪಿಕಾ ಪಳ್ಳಿಕಲ್ ಹಾಗೂ ಜೋಶ್ನಾ ಚಿನ್ನಪ್ಪ ಬೆಳ್ಳಿ ಪದಕ ಗಳಿಸಿದ್ದಾರೆ.
ಕಾಮನ್ವೆಲ್ತ್ 2018: ದೀಪಿಕಾ ಪಳ್ಳಿಕಲ್-ಜೋಶ್ನಾ ಚಿನ್ನಪ್ಪ ಜೋಡಿಯಿಂದ ಬೆಳ್ಳಿ ಪದಕ ಸಾಧನೆ
ಕಾಮನ್ವೆಲ್ತ್ 2018: ದೀಪಿಕಾ ಪಳ್ಳಿಕಲ್-ಜೋಶ್ನಾ ಚಿನ್ನಪ್ಪ ಜೋಡಿಯಿಂದ ಬೆಳ್ಳಿ ಪದಕ ಸಾಧನೆ
Updated on
ಗೋಲ್ಡ್ ಕೋಸ್ಟ್: ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳಾ ಡಬಲ್ಸ್ ಸ್ಕ್ವಾಷ್ ವಿಭಾಗದಲ್ಲಿ   ಹಾಲಿ ಚಾಂಪಿಯನ್ ದೀಪಿಕಾ  ಪಳ್ಳಿಕಲ್ ಹಾಗೂ ಜೋಶ್ನಾ ಚಿನ್ನಪ್ಪ ಬೆಳ್ಳಿ ಪದಕ ಗಳಿಸಿದ್ದಾರೆ.
22 ನಿಮಿಷಗಳ ಹೋರಾಟದಲ್ಲಿ ಕಿವೀಸ್ ಜೋಡಿಯ ವಿರುದ್ಧ ಸೇಣೆಸಿದ ಭಾರತೀಯ ಆಟಗಾರ್ತಿಯರು 0-2 (9-11, 8-11) ಅಂತರದಿಂದ ಪರಾಭವಗೊಂಡರು.
ಗ್ಲ್ಯಾಸ್ಗೋದಲ್ಲಿ ಚಿನ್ನದ ಪದಕ ಗಳಿಸಿದ್ದ ಈ ಜೋಡಿ ಈ ಬಾರಿಯ ಹಣಾಹಣಿಯಲ್ಲಿ ತಮ್ಮ ಎದುರಾಳಿಗಳ ಸವಾಲನ್ನು ಮೀರುವಲ್ಲಿ ವಿಫಲಾರಾದರು.
ಪ್ರಾರಂಭದಲ್ಲಿ ಸಾಧಾರಣ ಹೋರಾಟ ನೀಡಿದ್ದ  ನ್ಯೂಜಿಲೆಂಡ್ ಆಟಗಾರ್ತಿಯರು ಎರಡನೇ ಸುತ್ತಿನಲ್ಲಿ ತೀವ್ರ ಪೈಪೋಟಿಯೊಡ್ಡಿದ್ದರು.
ಇದಕ್ಕೂ ಮುನ್ನ ಶನಿವಾರ ನಡೆದಿದ್ದ ಸೆಮಿಫೈನಲ್ ಹಣಾಹಣಿಯಲ್ಲಿ ದೀಪಿಕಾ -ಜೋಶ್ನಾ  ಜೋಡಿಯು ಇಂಗ್ಲೆಂಡಿನ ಆಟಗಾರ್ತಿಯರ ವಿರುದ್ಧ  2-0 (11-10, 11-5)  ನೇರ ಸೆಟ್ ಗಳಲ್ಲಿ ಜಯ ಸಾಧಿಸಿದ್ದರು.
ಸೌರವ್ ಘೋಸಲ್ ಅವರೊಡನೆ ಮಿಶ್ರ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಬಳಿಕ ಗೋಲ್ಡ್ ಕೋಸ್ಟ್ ನಲ್ಲಿ ಜೋಶ್ನಾ ಅವರ ಪ್ರಥಮ ಹಾಗು ದೀಪಿಕಾ ಅವರ ಎರಡನೇ ಪದಕ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com