ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌: ಸೆಮೀಸ್ ನಲ್ಲಿ ಸೈನಾ, ಪ್ರಣೋಯ್ ಗೆ ಸೋಲು

ಚೀನಾದ ವುಹಾನ್ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌ ಪಂದ್ಯಾವಳಿಯಲ್ಲಿ ಭಾರತದ ಎಚ್ಎಸ್. ಪ್ರಣೋಯ್ ಹಾಗೂ ಸೈನಾ ನೆಹ್ವಾಲ್ ಸೆಮಿ ಫೈನಲ್ಸ್ ...
ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌: ಸೆಮೀಸ್ ನಲ್ಲಿ ಸೈನಾ, ಪ್ರಣೋಯ್ ಗೆ ಸೋಲು
ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌: ಸೆಮೀಸ್ ನಲ್ಲಿ ಸೈನಾ, ಪ್ರಣೋಯ್ ಗೆ ಸೋಲು
ವುಹಾನ್‌(ಚೀನಾ): ಚೀನಾದ ವುಹಾನ್ ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್ ಶಿಪ್‌ ಪಂದ್ಯಾವಳಿಯಲ್ಲಿ ಭಾರತದ ಎಚ್ಎಸ್. ಪ್ರಣೋಯ್ ಹಾಗೂ  ಸೈನಾ ನೆಹ್ವಾಲ್ ಸೆಮಿ ಫೈನಲ್ಸ್ ಹಂತದಲ್ಲಿ ಪರಾಭವ ಅನುಭವಿಸಿದ್ದಾರೆ.
ಶನಿವಾರ ನಡೆದ ಪಂದ್ಯಗಳಲ್ಲಿ ಸೈನಾ ನೆಹ್ವಾಲ್ ಚೈನಾ ತೈಪೆಯ ವಿಶ್ವ ನಂ .1ಆಟಗಾರ್ತಿ ತೈ ಝು ಯಿಂಗ್ ವಿರುದ್ಧ  25-27, 19-21 ಅಂತರದಲ್ಲಿ ಸೋಲನುಭವಿಸಿದ್ದಾರೆ. ಇನ್ನು ಪ್ರಣೋಯ್ ಚೀನಾದ ಚೆನ್ ಲಾಂಗ್ವಿರುದ್ಧದ ಸೆಣಸಿನಲ್ಲಿ 21-16, 21-18 ಅಂತರದಿಂದ ಪರಾಜಿತರಾದರು.
ಇದರೊಡನೆ ಬ್ಯಾಡ್ಮಿಂಟನ್ ಸರಣಿಯಲ್ಲಿ ಭಾರತಕ್ಕೆ ಎರಡು ಕಂಚಿನ ಪದಕ ಮಾತ್ರ  ಖಾತ್ರಿಯಾಗಿದೆ. ಪ್ರಣೋಯ್ ಹಾಗೂ ಸೈನಾ ತಲಾ ಒಂದೊಂದು ಕಂಚಿನ ಪದಕಕ್ಕೆ ಕೊರಳೊಡ್ಡಲಿದ್ದಾರೆ.
ಏತನ್ಮಧ್ಯೆ ಶುಕ್ರವಾರದ ಪಂದ್ಯದಲ್ಲಿ ಬಾರತದ ಪಿವಿ ಸಿಂಧೂ ಕೊರಿಯಾದ ಏಳನೇ ಶ್ರೇಯಾಂಕದ ಆಟಗಾರ್ತಿ  ಸುಂಗ್‌ ಜಿ ಹ್ಯುನ್‌ ಗೆ 19-21, 10-21ರಿಂದ ಶರಣಾಗಿದ್ದರು. ಇದೇ ವೇಳೆ ಮಲೇಷಿಯಾದ ಲೀ ಚೋಂಗ್ ವೀ ಅವರನ್ನು ಎದುರಿಸಿದ್ದ ಕಿಡಂಬಿ ಶ್ರೀಕಾಂತ್ 12-21, 15-21 ಅಂತರದ ಸೋಲು ಕಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com