ಜಕಾರ್ತಾ: ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018ರ 8ನೇ ದಿನವಾದ ಭಾನುವಾರ ಭಾರತ ಮತ್ತೆರಡು ಬೆಳ್ಳಿ ಪದಕ ಗಳಿಸಿದೆ..ಈಕ್ವೆಸ್ಟ್ರಿಯನ್ ಕ್ರೀಡಾ ವಿಭಾಗದಲ್ಲಿ ಭಾರತದ ಮಿರ್ಜಾ ಫೌದ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ರಜತ ಪದಕಕ್ಕೆ ಕೊರಳೊಡ್ಡಿದ್ದಾರೆ..ಈ ವಿಭಾಗದಲ್ಲಿ ಜಪಾನ್ ನ ಯೋಶಿಕಿ ಚಿನ್ನ ಗಳಿಸಿದರೆ ಥೈಲ್ಯಾಂಡ್ ನ ಕ್ರೀಡಾಪಟು ಕಂಚಿನ ಪದಕ ಪಡೆದುಕೊಂಡಿದ್ದಾರೆ..ಮಿರ್ಜಾ ಫೌದ್ ಬೆಳ್ಳಿ ಪರಕದ ಮೂಲಕ 1982ರ ಏಷ್ಯನ್ ಗೇಮ್ಸ್ ನಂತರ ಭಾರತ ಇದೇ ಪ್ರಥಮ ಬಾರಿಗೆ ಈಕ್ವೆಸ್ಟ್ರಿಯನ್ ಸ್ಪರ್ಧೆಯ ವೈಯುಕ್ತಿಕ ವಿಭಾಗದಲ್ಲಿ ಪದಕ ಗಳಿಸಿದೆ..ಇನ್ನು ಇದೇ ಸ್ಪರ್ಧೆಯ ಟೀಂ ವಿಭಾಗದಲ್ಲಿಯೂ ಬಾರತ 121.30 ಅಂಕ ಗಳಿಸಿಕೊಳ್ಳುವ ಮೂಲಕ ಇನ್ನೊಂದು ಬೆಳ್ಳಿ ಪದಕ ಜಯಿಸಿದೆ..ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 7 ಚಿನ್ನ, 7 ಬೆಳ್ಳಿ, 17 ಕಂಚಿನ ಪದಕಗಳೊಡನೆ ಒಟ್ಟು 31 ಪದಕ ಗಳಿಸಿ ಸಾಧನೆ ಮೆರೆದಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics