

ನವದೆಹಲಿ:ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ ಸಿಂಗಲ್ ಸುತ್ತಿನ ಬ್ಯಾಂಡ್ಮಿಟನ್ ಪಂದ್ಯದಲ್ಲಿ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಸೈನಾ ನೆಹ್ವಾಲ್ ಭಾರತಕ್ಕೆ ಮೊದಲ ಬಾರಿಗೆ ಕಂಚಿನ ಪದಕ ತಂದುಕೊಟ್ಟಿರುವುದಕ್ಕೆ ಪ್ರಧಾನಿ ನರೇಂದ್ರಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
18 ನೇ ಆವೃತ್ತಿಯ ಪಂದ್ಯದ ಸೆಮಿಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ಚೀನಾದ ತೈ ಝು ಯಿಂಗ್ ವಿರುದ್ಧ 17-21, 14-21 ನೇರ ಗೇಮ್ ಗಳಿಂದ ಪರಾಭವಗೊಂಡಿದ್ದರು.
ಸೈನಾ ನೆಹ್ವಾಲ್ ಏಷ್ಯನ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಪದಕ ತಂದುಕೊಡುವ ಮೂಲಕ ಇತಿಹಾಸ ಬರೆಯುವುದರೊಂದಿಗೆ ನಮ್ಮೆಲ್ಲರಿಗೂ ಹೆಮ್ಮೆಯುಂಟುಮಾಡಿದ್ದಾರೆ ಎಂದು ನರೇಂದ್ರಮೋದಿ ಶ್ಲಾಘಿಸಿದ್ದಾರೆ.