ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. .ಮನ್ಜೀತ್ ಸಿಂಗ್ 1 ನಿಮಿಷ 46.15 ಸೆಕೆಂಡ್ ಗಳಲ್ಲಿ ನಿಗದಿತ ಓಟವನ್ನು ಪೂರ್ಣಗೊಳಿಸಿದರೆ, ಜಿನ್ಸನ್ ಜಾನ್ಸನ್ 1 ನಿಮಿಷ 46.38 ಸೆಕೆಂಡ್ ಗಳಲ್ಲಿ ಗುರಿ ತಲುಪಿದ್ದಾರೆ. .ಈ ಎರಡು ಪದಕಗಳ ಮೂಲಕ ಭಾರತ ಈ ವರೆಗೂ ಗಳಿಸಿರುವ ಒಟ್ಟು ಪದಕಗಳ ಸಂಖ್ಯೆ 49 ಕ್ಕೆ ಏರಿಕೆಯಾಗಿದ್ದು ಪದಕಗಳ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics