BWF ವರ್ಲ್ಡ್ ಟೂರ್ ಫೈನಲ್ಸ್: ರಾಚ್ಟಾನೋಕ್ ಇಂಟನಾನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆ ಲಗ್ಗೆ

ಚೀನಾದ ಗುವಾಂಗ್ ಜೌನಲ್ಲಿ ನಡೆಯುತ್ತಿರುವ BWF ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೇರಿದ್ದಾರೆ.
ಪಿವಿ ಸಿಂಧು (ಸಂಗ್ರಹ ಚಿತ್ರ)
ಪಿವಿ ಸಿಂಧು (ಸಂಗ್ರಹ ಚಿತ್ರ)
Updated on: 
ಗುವಾಂಗ್ ಜೌ: ಚೀನಾದ ಗುವಾಂಗ್ ಜೌನಲ್ಲಿ ನಡೆಯುತ್ತಿರುವ BWF ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧು ಅವರು ಇಂಡೋನೇಷ್ಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೇರಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು ಇಂಡೋನೇಷ್ಯಾ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ರನ್ನು 21-16, 25-23 ನೇರ ಸೆಟ್ ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 
ಕೇವಲ 35 ನಿಮಿಷಗಳಲ್ಲೇ ಮುಕ್ತಾಯವಾದ ಈ ಪಂದ್ಯದಲ್ಲಿ ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಪಿವಿ ಸಿಂಧು ಮೊದಲೆ ಸೆಟ್ ಅನ್ನು  21-16 ಭಾರಿ ಅಂತರದಲ್ಲಿ ಗೆದ್ದು ಬೀಗಿದರು. ಆದರೆ 2ನೇ ಸೆಟ್ ನಲ್ಲಿ ಸಿಂಧು ಇಂಡೋನೇಷ್ಯಾ ಆಟಗಾರ್ತಿಯಿಂದ ತೀವ್ರ ಪೈಪೋಟಿ ಎದುರಿಸಿದರೂ ಅಂತಿಮವಾಗಿ 25-23 ನೇರ ಸೆಟ್ ಗಳ ಅಂತರದ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಅಂತೆಯೇ ಈ ಗೆಲುವಿನ ಮೂಲಕ ತಮ್ಮ ಗ್ರೂಪ್ ನಲ್ಲಿ ಪಿವಿ ಸಿಂಧು ಅಗ್ರ ಸ್ಥಾನಕ್ಕೇರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com