ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 1-3 ಅಂತರದ ಸೋಲು

ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು.
ಫೈನಲ್ ಪಂದ್ಯ
ಫೈನಲ್ ಪಂದ್ಯ
Updated on: 

ಬ್ರೇಡಾ: ನೇದರ್ ಲ್ಯಾಂಡ್ಸ್ ನ ಬ್ರೇಡಾದಲ್ಲಿ ನಡೆದ  ಚಾಂಫಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 1-3 ಗೋಲುಗಳ ಅಂತರದಿಂದ ಸೋಲಿಗೆ ಶರಣಾಯಿತು.

ನಿನ್ನೆ ನಡೆದ ಕೊನೆಯ ಸುತ್ತಿನ ರಾಬಿನ್ ಪಂದ್ಯದಲ್ಲಿ ನೆದರ್ ಲ್ಯಾಂಡ್ಸ್ ವಿರುದ್ಧ 1-1 ಡ್ರಾ  ಮಾಡಿಕೊಂಡಿದ್ದ ಭಾರತ ಇಂದು ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಹೋರಾಡುವಲ್ಲಿ ವಿಫಲವಾಯಿತು.

ಕಳೆದ ಆವೃತ್ತಿಯ  ಫೈನಲ್ಸ್ ನಲ್ಲಿಯೂ ಮುಖಾಮುಖಿಯಾಗಿದ್ದ ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ಪ್ರಬಲ ಹೋರಾಟ ಕಂಡುಬಂದಿತ್ತು. ಆದರೆ. ಆಸ್ಟ್ರೇಲಿಯಾ ಭಾರತವನ್ನು ಸೋಲಿಸುವ ಮೂಲಕ 15 ನೇ ಚಾಂಫಿಯನ್ ಟ್ರೋಫಿಯನ್ನು ವಶಪಡಿಸಿಕೊಂಡಿತ್ತು.
ಆದಾಗ್ಯೂ , ಭಾರತ 37ನೇ ಹಾಗೂ ಅಂತಿಮ ಆವೃತ್ತಿಯಲ್ಲಿ  ಕೂಕಬುರಸ್  ಅನ್ನು ಸೋಲಿಸುವಲ್ಲಿ  ವಿಫಲವಾದ ಭಾರತ ರನ್ನರ್ ಅಫ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com