ಬೀಜಿಂಗ್: ಪ್ರತಿಷ್ಠಿತ ಚೀನಾ ಓಪನ್ ಬ್ಯಾಡ್ಮಿಂತನ್ ಪಂದ್ಯಾವಳಿಯಲ್ಲಿ ಭಾರತದ ಕ್ರೀಡಾತಾರೆಯರಾದ ಪಿವಿ ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಹಂತ ತಲುಪಿದ್ದಾರೆ..ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧೂ ಥಾಯ್ ಲ್ಯಾಂಡಿನ ಬುಸಾನಸ್ ಒಗ್ವಂಬುಗ್ವಾನ್ ಅವರನ್ನು 21-12, 21-15 ನೇರ ಸೆಟ್ ಗಳಿಂದ ಮಣಿಸಿ ಎಂಟರ ಘಟ್ಟ ತಲುಪಿದ್ದಾರೆ..ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಇಂಡೋನೇಷಿಯಾದ ಟಾಮಿ ಸುಗಿರ್ಟೋ ಅವರನ್ನು 10-21, 21-9, 21-9 ಅ<ತರದಲ್ಲಿ ಪರಾಜಿತಗೊಳಿಸಿ ಮುಂದಿನ ಸುತ್ತಿಗೆ ಪ್ರವೇಶ ಗಿಟ್ಟಿಸಿದ್ದಾರೆ..ಸಿಂಧೂ ತನ್ನ ಮುಂದಿನ ಸುತ್ತಿನಲ್ಲಿ ಫ್ರೆಂಚ್ ಓಪನ್ ಪ್ರತಿಸ್ಪರ್ಧಿಯಾಗಿದ್ದ ಹೇ ಬಿಂಗ್ಜಿಯಾವೊ ಅಥವಾ ಕೆನಡಾದ ಮಿಚೆಲ್ಲಿ ಲೀ ಅವರನ್ನು ಎದುರಿಸಬೇಕಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics